ಶುಕ್ರವಾರ, ಡಿಸೆಂಬರ್ 6, 2019
17 °C

ಸುಭಾಷ್‌ ಚಂದ್ರ ಬೋಸ್‌ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ: ಫ್ರಾನ್ಸ್‌ ರಹಸ್ಯ ವರದಿ ಹೇಳಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸುಭಾಷ್‌ ಚಂದ್ರ ಬೋಸ್‌ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ: ಫ್ರಾನ್ಸ್‌ ರಹಸ್ಯ ವರದಿ ಹೇಳಿಕೆ

ನವದೆಹಲಿ: ‘1945ರಲ್ಲಿ ತೈವಾನ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಮೃತಪಟ್ಟಿಲ್ಲ’ ಎಂದು ಫ್ರಾನ್ಸ್‌ ರಹಸ್ಯ ವರದಿ ಹೇಳಿದೆ.

ಫ್ರಾನ್ಸ್‌ನ ರಾಷ್ಟ್ರೀಯ ಆರ್ಕೈವ್‌ ದಾಖಲೆಗಳಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬ ಮಾಹಿತಿ ದಾಖಲಾಗಿದೆ ಎಂದು  ಫ್ರಾನ್ಸ್‌ ಇತಿಹಾಸಕಾರ ಜೆಬಿಪಿ ಮೋರ್‌  ತಿಳಿಸಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರ ನೇತಾಜಿ ಅವರ ಸಾವಿನ ರಹಸ್ಯ ತಿಳಿಯಲು ಮೂರು ಆಯೋಗಗಳನ್ನು ನೇಮಕ ಮಾಡಿತ್ತು.

ಶಾನವಾಜ್‌ ಆಯೋಗ ಮತ್ತು  ಜಿ.ಡಿ. ಖೋಸ್ಲಾ ಆಯೋಗ ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದವು. ಆದರೆ ಮುಖರ್ಜಿ ಆಯೋಗ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದು ಹೇಳಿತ್ತು. 

1947ರ ಡಿಸೆಂಬರ್‌ 11ರವರೆಗೂ ನೇತಾಜಿ ಅವರು ಎಲ್ಲಿದ್ದಾರೆ ಎಂಬ ಸುಳಿಯು ಯಾರಿಗೂ ತಿಳಿದಿರಲಿಲ್ಲ. ವಿಮಾನ ಅಪಘಾತದ ಬಳಿಕ ಸುಭಾಷ್‌ ಚಂದ್ರ ಬೋಸ್‌ ಅವರ ಹೆಸರು ಕೇಳಿ ಬಂತು ಎಂದು ಮೋರ್‌ ತಿಳಿಸಿದ್ದಾರೆ.

ಮೋರ್‌ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಪ್ರಾನ್ಸ್‌ ರಾಷ್ಟ್ರೀಯ ದಾಖಲೆಗಳನ್ನು ಉಲ್ಲೇಖ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)