ಶನಿವಾರ, ಡಿಸೆಂಬರ್ 7, 2019
25 °C

ಕಂಗನಾ ಕಷ್ಟವ ಕೇಳಿ...

Published:
Updated:
ಕಂಗನಾ ಕಷ್ಟವ ಕೇಳಿ...

ಹಲವರು ದಪ್ಪವಿದ್ದು ಸಣ್ಣಗಾಗಲು ಹಗಲು ರಾತ್ರಿ ದೇಹ ದಂಡಿಸುತ್ತಾರೆ. ಆದರೆ ಕಂಗನಾ ತೀರಾ ಸಣ್ಣಗಿದ್ದು ದಪ್ಪಗಾಗಲು ಹಲವು ಕಸರತ್ತು ಮಾಡುತ್ತಾರೆ. ತೀರಾ ಸಣಕಲು ದೇಹ ಹೊಂದಿದ್ದ ಕಂಗನಾ ದಪ್ಪಗಾಗಿ ‘ಫಿಟ್‌ ಫಿಗರ್’ ಆಗಲು ಸಿಕ್ಕಿದ್ದೆಲ್ಲಾ ತಿನ್ನುತ್ತಾರಂತೆ.

ಕೊಬ್ಬಿನ ಅಂಶವಿರುವ ತಿಂಡಿ, ಊಟ ಇವರ ಪ್ರಧಾನ ಆಹಾರ. ಈ ಹಿಂದೆ ಅವರು ಸಿಕ್ಕಾಪಟ್ಟೆ ತಿಂದ ಕಾರಣ ‘ಅಂದುಕೊಂಡ ಭಾಗಗಳಲ್ಲಿ’ ಕೊಬ್ಬು ಶೇಖರಣೆಯಾಗುವ ಬದಲು ಹೊಟ್ಟೆ, ಕೈಕಾಲು ದಪ್ಪವಾಗುತ್ತಿತ್ತಂತೆ. ನಂತರ ಬಗೆ ಬಗೆಯ ದೇಹ ಕಸರತ್ತು ಮಾಡಿ ಸೆಕ್ಸಿ ಫಿಗರ್ ರೂಪಿಸಿಕೊಂಡರಂತೆ.

ಮಾಂಸಾಹಾರ ಪ್ರಿಯೆ ಕಂಗನಾ ಈಚೆಗೆ ಕಷ್ಟಪಟ್ಟು ಸಸ್ಯಹಾರಿಯಾಗಿದ್ದಾರೆ.ದಿನಕ್ಕೆ 12 ಲೋಟ ನೀರು ಕುಡಿಯುವುದು ಅವರ ಡಯಟ್‌ನ ಮೂಲ ಮಂತ್ರ.

ಯಾವುದೇ ಸಂದರ್ಭ ಎದುರಾದರೂ ಊಟ ತಪ್ಪಿಸುವುದಿಲ್ಲ. ಪ್ರತಿ ಎರಡು ಗಂಟೆಗೊಮ್ಮೆ ಲಘು ಆಹಾರ ಸೇವಿಸುತ್ತಾರೆ.

ಜಂಕ್‌ ಫುಡ್, ಎಣ್ಣಿಯುಕ್ತ ಆಹಾರ, ಸಕ್ಕರೆಯುಕ್ತ ಆಹಾರವನ್ನು ಕಂಗನಾ ಸೇವಿಸುವುದಿಲ್ಲ. ಅಪರೂಪಕ್ಕೆ ಪಿಜ್ಜಾ ತಿನ್ನುತ್ತಾರೆ.

ಕಂಗನಾಗೆ ಫಿಟ್‌ನೆಸ್‌ ತರಬೇತು ನೀಡುವವರು ಲೀನಾ ಮೂಗ್ರಾ. ವಾರದಲ್ಲಿ ಐದು ದಿನ 2 ಗಂಟೆ ಲೀನಾ ಮಾರ್ಗದರ್ಶನದಲ್ಲಿ ಕಂಗನಾ ಕಸರತ್ತು ಮಾಡುತ್ತಾರೆ.

ಪೋಷಕಾಂಶ, ಪ್ರೋಟಿನ್, ಕಾರ್ಬೊಹೈಡ್ರೇಟ್ಸ್‌ ಹೆಚ್ಚು ಇರುವ ಹೊಸ ಆಹಾರ ಪಟ್ಟಿ ಮಾಡಿಕೊಂಡಿದ್ದಾರಂತೆ.

ಸೌಂದರ್ಯದ ಗುಟ್ಟು

l ಚರ್ಮ: ಕಂಗನಾ ಅವರದ್ದು ಮೇಕಪ್‌ ಇಲ್ಲದೆಯೂ ಹೊಳೆಯುವ ಚರ್ಮ. ಪ್ರತಿ ದಿನ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಬಳಸುತ್ತಾರೆ. ಮಲಗುವ ಮುನ್ನ ಮೇಕಪ್ ತೆಗೆದು ಎಣ್ಣೆಯಲ್ಲಿ ಮುಖವನ್ನು ಮಸಾಜ್ ಮಾಡಿ ನಂತರ ಸ್ವಚ್ಚವಾಗಿ ತೊಳೆಯುತ್ತಾರೆ. ಫೇಶಿಯಲ್ ಮಾಡಿಸುವುದಿಲ್ಲ. ಕೆಲವೊಮ್ಮೆ ಕ್ಲೀನ್ ಅಪ್ ಮಾಡಿಸುತ್ತಾರೆ.

l ಕೂದಲು: ದಟ್ಟವಾದ ಗುಂಗುರು ಕೂದಲು ಕಂಗನಾ ಅವರಿಗೆ ವರದಾನ. ಹಾಗೇ ಪ್ರತಿ ಸಿನಿಮಾದಲ್ಲೂ ತಮ್ಮ ಕೇಶವಿನ್ಯಾಸದೊಂದಿಗೆ ಹಲವು ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ರಾಸಾಯನಿಕಗಳಿಂದ ಕೂದಲು ತುಂಡಾಗದಂತೆ ರಿಪೇರ್ ಟ್ರೀಟ್‌ಮೆಂಟ್ ಮಾಡಿಕೊಳ್ಳುತ್ತಾರೆ. ಕೂದಲಿಗೆ ಸ್ಪಾ, ಡೀಪ್ ಕಂಡಿಷನಿಂಗ್ ಕೂಡ ನಿಯಮಿತವಾಗಿ ಮಾಡಿಸಿಕೊಳ್ಳುತ್ತಾರೆ. ವಾರದಲ್ಲಿ ಮೂರು ದಿನ ಎಣ್ಣೆ ಹಾಗೂ ಹಬೆಯ ಸ್ನಾನ ಮಾಡುತ್ತಾರೆ.

l ಬೆಳಿಗ್ಗೆ 8ಕ್ಕೆ: ಓಟ್ಸ್‌ ಗಂಜಿ, ಧಾನ್ಯಗಳು

l ಬೆಳಿಗ್ಗೆ 11ಕ್ಕೆ: ಒಂದು ಬಟ್ಟಲು ಹಣ್ಣು, ಪ್ರೊಟೀನ್ ಶೇಕ್‌.

l ಮಧ್ಯಾಹ್ನ: ತರಕಾರಿ ಸಲಾಡ್, ಬೇಳೆ, ಅನ್ನ, ಬೇಯಿಸಿದ ತರಕಾರಿ, 2 ಚಪಾತಿ.

l ಸಂಜೆ 6ಕ್ಕೆ: ಬ್ರೌನ್ ಬ್ರೆಡ್ರಾ

l ರಾತ್ರಿ ಊಟ: ಸೂಪ್, ಬೇಯಿಸಿದ ತರಕಾರಿ ಅಥವಾ ತಾಜಾ ಸಲಾಡ್.ಸೋಮವಾರ ಸ್ಟ್ರೆಂಥ್ ಟ್ರೈನಿಂಗ್:

 ಸ್ಟ್ರೆಂಥ್ ಟ್ರೈನಿಂಗ್‌ನಲ್ಲಿ ಪುಶ್‌ ಅಪ್ಸ್‌, ಸ್ಕ್ವಾಟ್ಸ್‌, ಪುಲ್‌ ಅಪ್ಸ್‌ (10 ಸೆಟ್ಸ್‌, 10 ರಿಪ್ಸ್‌), 20 ನಿಮಿಷ ಓಟ.

 ಮಂಗಳವಾರ: ಸ್ಟ್ರೆಚಿಂಗ್, 45 ನಿಮಿಷ ಕಿಕ್‌ ಬಾಕ್ಸಿಂಗ್, 20 ನಿಮಿಷ ಎಲಿಪ್ಟಿಕಲ್ ವರ್ಕ್‌ಔಟ್.

 ಬುಧವಾರ: ವ್ಯಾಯಾಮಕ್ಕೆ ರಜೆ

 ಗುರುವಾರ: ಆಬ್ಸ್‌ ಲೋವರ್ ಬ್ಯಾಕ್:

 30 ನಿಮಿಷ ಹರ್ಡಲ್ ಟ್ರೈನಿಂಗ್ ಹಾಗೂ ಓಟ. 20 ನಿಮಿಷ ಆಬ್ಸ್‌ ವ್ಯಾಯಾಮ, ಹಾಗೂ ಲೋವರ್ ಬ್ಯಾಕ್ ವಾಯಾಮ.

 ಶುಕ್ರವಾರ: ಯೋಗ

 ಪವರ್ ಯೋಗ 45 ನಿಮಿಷ, 10 ನಿಮಿಷ ಧ್ಯಾನ.

 ಶನಿವಾರ ಪಿಎಚ್‌ಎ:

 ಪಿಎಚ್‌ಎ (ಪೆರಿಫೆರಲ್ ಹಾರ್ಟ್ ಆ್ಯಕ್ಷನ್) ಹಾಗೂ ಶಕ್ತಿ, ಮಾಂಸ ಹೆಚ್ಚಿಸಿಕೊಳ್ಳಲು ಟರ್ಬುಲೆನ್ಸ್ ತರಬೇತಿ.

 ಭಾನುವಾರ ವಿಶ್ರಾಂತಿ

ಪ್ರತಿಕ್ರಿಯಿಸಿ (+)