ಬುಧವಾರ, ಅಕ್ಟೋಬರ್ 21, 2020
24 °C

ಆಸ್ತಮಾ, ಶ್ವಾಸಕೋಶ ಕಾಯಿಲೆಗೆ 32 ಲಕ್ಷ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಆಸ್ತಮಾ, ಶ್ವಾಸಕೋಶ ಕಾಯಿಲೆಗೆ 32 ಲಕ್ಷ ಬಲಿ

ನವದೆಹಲಿ: ದೀರ್ಘ ಕಾಲ ಕಾಡುವ, ಉಸಿರಾಟದ ಕಾಯಿಲೆಗಳಾದ ಆಸ್ತಮಾ ಮತ್ತು ಸಿಒಪಿಡಿಯಿಂದಾಗಿ (ಕ್ರಾನಿಕ್‌ ಅಬ್ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ –ಶ್ವಾಸಕೋಶದ ಕಾಯಿಲೆ– ಸಾಮಾನ್ಯವಾಗಿ ಶ್ವಾಸಕೋಶದಲ್ಲಿನ ವಾಯು ಕೋಶಗಳು ಉಬ್ಬುವುದು, ಶ್ವಾಸನಾಳಗಳ ಉರಿಯೂತ) 2015ರಲ್ಲಿ ಜಗತ್ತಿನಾದ್ಯಂತ 32 ಲಕ್ಷಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಹೊಸ ಅಧ್ಯಯನ ಹೇಳಿದೆ.

ಭಾರತ ಮತ್ತು ಇತರ ಮೂರು ದೇಶಗಳಲ್ಲಿ ಸಿಒಪಿಡಿಯಿಂದಾಗಿ ಹೆಚ್ಚು ಸಂಖ್ಯೆಯ ಜನ ಮೃತಪಟ್ಟಿದ್ದಾರೆ ಎಂದು ಅದು ವಿವರಿಸಿದೆ.

1990 ಮತ್ತು 2015ರ ನಡುವಣ 25 ವರ್ಷಗಳ ಅವಧಿಯಲ್ಲಿ ಪ್ರಪಂಚದಾದ್ಯಂತ ದಾಖಲಾದ ಈ ಎರಡು ಕಾಯಿಲೆಗಳು ಮತ್ತು ಅದರಿಂದ ಸಾವು ಉಂಟಾದ ಪ್ರಕರಣಗಳನ್ನು ಅಧ್ಯಯನ ನಡೆಸಲಾಗಿದೆ.

‘ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌’ ಎಂಬ ಹೆಸರಿನಲ್ಲಿ ನಡೆದಿರುವ ಈ ಅಧ್ಯಯನದ ವರದಿ ‘ಲ್ಯಾನ್ಸೆಟ್‌ ರೆಸ್ಪಿರೇಟರಿ ಮೆಡಿಸಿನ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

**

32 ಲಕ್ಷ: ಸಿಒಪಿಡಿಗೆ ಬಲಿಯಾದವರ ಸಂಖ್ಯೆ

4 ಲಕ್ಷ: ಆಸ್ತಮಾದಿಂದಾಗಿ ಅಸುನೀಗಿದವರು

**

ಹೆಚ್ಚು ಸಾವು ಎಲ್ಲಿ?

ಸಿಒಪಿಡಿಯಿಂದಾಗಿ ಪಪುವಾ ನ್ಯೂಗಿನಿಯಲ್ಲಿ ಅತೀ ಹೆಚ್ಚು ಜನ ಮೃತಪಟ್ಟಿದ್ದಾರೆ. ನಂತರ ಸ್ಥಾನದಲ್ಲಿ ಭಾರತ, ಲೆಸೊಥೊ ಮತ್ತು ನೇಪಾಳ ರಾಷ್ಟ್ರಗಳಿವೆ.

ಆಸ್ತಮಾಕ್ಕೆ ಅಫ್ಗಾನಿಸ್ತಾನದಲ್ಲಿ ಹೆಚ್ಚು ಜನರು ಬಲಿಯಾಗಿದ್ದಾರೆ. ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌, ಫಿಜಿ, ಕಿರಿಬಟಿ, ಲೆಸೊಥೊ, ಪಪುವಾ ನ್ಯೂಗಿನಿ ಮತ್ತು ನ್ಯೂಜಿಲ್ಯಾಂಡ್‌ಗಳು ನಂತರದ ಸ್ಥಾನಗಳಲ್ಲಿವೆ.

**

ಭಾರತದಲ್ಲಿ ಎಷ್ಟು?

2774.46: ಪ್ರತಿ 1 ಲಕ್ಷ ಜನರಲ್ಲಿ ಕಂಡು ಬಂದ ಸಿಒಪಿಡಿ ಪ್ರಕರಣ

4021.72: ಪ್ರತಿ 1 ಲಕ್ಷ ಜನರಲ್ಲಿ ಕಂಡು ಬಂದ ಆಸ್ತಮಾ ಪ್ರಕರಣ

**

* ಒಟ್ಟಾರೆಯಾಗಿ ಸಿಒಪಿಡಿ ದಾಖಲಾದ ಮತ್ತು ಅದರಿಂದ ಜನರು ಮೃತಪಟ್ಟ ಪ್ರಮಾಣ 1990 ರಿಂದೀಚೆಗೆ ಇಳಿಕೆಯಾಗಿದೆ. ಆದರೆ,  ಜನಸಂಖ್ಯೆ ಮತ್ತು ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಈ ಕಾಯಿಲೆಗಳಿಗೆ ತುತ್ತಾಗಿರುವವರ, ಮೃತಪಟ್ಟವರ ಸಂಖ್ಯೆ ಹೆಚ್ಚಿದೆ.

* 1990–2015ರ ನಡುವೆ ಸಿಒಪಿಡಿಯಿಂದ ಉಂಟಾಗಿರುವ ಸಾವಿನ ಪ್ರಮಾಣ ಶೇ 11.6 ರಷ್ಟು ಹೆಚ್ಚಿದ್ದರೆ, ದಾಖಲಾದ ಪ್ರಕರಣಗಳು ಶೇ 44.2ರಷ್ಟು ಹೆಚ್ಚಾಗಿದೆ.

**

28 ಲಕ್ಷ: 1990ರಲ್ಲಿ ಸಿಪಿಒಡಿಗೆ ಬಲಿಯಾದವರ ಸಂಖ್ಯೆ

12.1 ಕೋಟಿ: 1990ರಲ್ಲಿ ಸಿಒಪಿಡಿಯಿಂದ ಬಳಲುತ್ತಿದ್ದವರ ಸಂಖ್ಯೆ

17.45 ಕೋಟಿ: 2015ರಲ್ಲಿ ಸಿಒಪಿಡಿ ಸಮಸ್ಯೆ ಹೊಂದಿದ್ದವರ ಸಂಖ್ಯೆ

**

* 25 ವರ್ಷಗಳ ಅವಧಿಯಲ್ಲಿ ಆಸ್ತಮಾದಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಶೇ 26.2ರಷ್ಟು ಕಡಿಮೆಯಾಗಿದೆ. ಆದರೆ,  ಪ್ರಕರಣಗಳ ಸಂಖ್ಯೆ ಶೇ 12.6ರಷ್ಟು ಹೆಚ್ಚಿದೆ.

55 ಲಕ್ಷ: 1990ರಲ್ಲಿ ಆಸ್ತಮಾದಿಂದಾಗಿ ಮೃತಪಟ್ಟವರು

31.82 ಕೋಟಿ: 1990ರಲ್ಲಿ ಆಸ್ತಮಾದಿಂದ ಬಳಲುತ್ತಿದ್ದವರ ಸಂಖ್ಯೆ

35.82 ಕೋಟಿ: 2015ರಲ್ಲಿ ಆಸ್ತಮಾದಿಂದ ಬಳಲುತ್ತಿದ್ದವರು

**

ಅಧ್ಯಯನ ಹೇಳಿದ್ದು...

* ಬಡ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಕಾಯಿಲೆಗಳು ಹೆಚ್ಚು

* ಜಗತ್ತಿನಾದ್ಯಂತ ಆಸ್ತಮಾ ಸಾಮಾನ್ಯ ರೋಗ

* ಎರಡು ಕಾಯಿಲೆಗಳನ್ನೂ ಗುಣಪಡಿಸಬಹುದು. ಆದರೆ, ಬಹಳಷ್ಟು ಬಾರಿ ಜನರು ಈ ರೋಗಗಳನ್ನು ಸರಿಯಾಗಿ ಪತ್ತೆ ಮಾಡಲು ಹೋಗುವುದಿಲ್ಲ, ಚಿಕಿತ್ಸೆಯೂ ಪಡೆಯುವುದಿಲ್ಲ

* ಧೂಮಪಾನ, ವಾಯುಮಾಲಿನ್ಯ, ಪರೋಕ್ಷ ಧೂಮಪಾನ, ಮನೆಯಲ್ಲಿ ಬಳಸುವ ವಸ್ತುಗಳಿಂದ ಉಂಟಾಗುವ ವಾಯು ಮಾಲಿನ್ಯಗಳಿಂದ ಸಿಒಪಿಡಿಯ ಅಪಾಯ ಹೆಚ್ಚು

* ಸ್ವಚ್ಛತೆ ಇಲ್ಲದಿರುವುದು ಮತ್ತು ಧೂಮಪಾನ ಆಸ್ತಮಾಕ್ಕೆ ಪ್ರಮುಖ ಕಾರಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.