ಬಾಗಿನದ ಬದಲು ಮೀನು, ಆಮೆ, ಆಲಮ್ ಸಮರ್ಪಣೆ

ಭಾನುವಾರ, ಮೇ 26, 2019
27 °C

ಬಾಗಿನದ ಬದಲು ಮೀನು, ಆಮೆ, ಆಲಮ್ ಸಮರ್ಪಣೆ

Published:
Updated:

ಚಿತ್ರದುರ್ಗ: ಉತ್ತಮ ಮಳೆಯಾಗಿ ನದಿ, ಕೆರೆ, ಹೊಂಡಗಳು ತುಂಬಿ ಹರಿದಾಗ ಬಾಗಿನ ಸಮರ್ಪಿಸುವುದು ಸಂಪ್ರದಾಯ. ಆದರೆ ನಗರಸಭೆ ಹಾಲಿ ಮತ್ತು ಮಾಜಿ ಅಧ್ಯಕ್ಷರ, ಚಿತ್ರದುರ್ಗದ ಐತಿಹಾಸಿ ಸಿಹಿನೀರು ಹೊಂಡಕ್ಕೆ ಬಾಗಿನ ಅರ್ಪಿಸುವ ಬದಲು ಮೀನು, ಆಮೆ, ಆಲಮ್ (ನೀರು ಶುದ್ಧೀಕರಣ ವಸ್ತು) ಸಮರ್ಪಿಸಿದ್ದಾರ.

‘ನೀರನ್ನು ಗಂಗೆ, ಕಾವೇರಿ, ಗೋದಾವರಿ ಎಂಬುದಾಗಿ ಕರೆಯುವ ಮೂಲಕ ಮಾತೃದೇವತೆಯ ಸ್ಥಾನ ನೀಡಿದ್ದೇವೆ. ಅದನ್ನು  ಕಲುಷಿತ ಮಾಡಬಾರದು. ಈ ಉದ್ದೇಶದಿಂದ ಪೂಜಾ ಸಾಮಗ್ರಿಗಳನ್ನು ಸಿಹಿನೀರು ಹೊಂಡಕ್ಕೆ ಸಮರ್ಪಿಸುವ ಬದಲು ಈ ವಿನೂತನ ಪ್ರಯತ್ನಕ್ಕೆ ಮುಂದಾದೆವು’ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ತಿಳಿಸಿದರು.

ಮಳೆಯಿಂದ ನದಿ, ಕೆರೆ, ಹೊಂಡ ತುಂಬಿದಾಗ ಚುನಾಯಿತ ಪ್ರತಿನಿಧಿಗಳು, ಊರಿನ ಮುಖಂಡರು, ಮಹಿಳೆಯರು ಬಾಗಿನ ಸಮರ್ಪಿಸುತ್ತಾರೆ. ಇದನ್ನೇ ನಾವು ಅನುಸರಿಸಿದರೆ, ಎಲ್ಲರೂ ಕೂಡ ಪೂಜಾ ಸಾಮಗ್ರಿ ಎಸೆಯುವ ಮೂಲಕ ಮತ್ತೆ ಹೊಂಡದ ನೀರು ಮಲಿನ ಆಗುವ ಸಾಧ್ಯತೆ ಇದೆ. ಆದ್ದರಿಂದ ಹೊಸದಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದೇವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು.

ನೀರಿನ ಶುದ್ಧೀಕರಣಕ್ಕಾಗಿ ಆಲಮ್ ಹಾಕಿದ್ದೇವೆ. ಜಲಚರಗಳು ನೀರಿನಲ್ಲಿದ್ದಾಗ ಸಾಧ್ಯವಾದಷ್ಟು ಮಲಿನವಾಗುವುದು ತಪ್ಪುತ್ತದೆ ಎಂಬ ಉದ್ದೇಶದಿಂದ ಸಾಂಕೇತಿಕವಾಗಿ ಮೀನು, ಆಮೆ, ಆಲಮ್ ಹಾಕಲಾಗಿದ್ದು, ತಿಂಗಳ ನಂತರ ದೊಡ್ಡ ಮೀನುಗಳು ಮತ್ತು ಆಮೆಗಳನ್ನು ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry