ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ನಿಯೋಗಕ್ಕೆ ಸುಷ್ಮಾ ಸ್ವರಾಜ್‌ ಮನವಿ: ಎಚ್‌1ಬಿ ವೀಸಾ ನಿಯಂತ್ರಣ ಬೇಡ

Last Updated 17 ಅಕ್ಟೋಬರ್ 2017, 19:02 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವೃತ್ತಿಪರರು ಹೆಚ್ಚಾಗಿ ಬಳಸುವ ಎಚ್‌1ಬಿ ವೀಸಾ ಬಳಕೆಗೆ ನಿಯಂತ್ರಣ ಹೇರಲು ಅಮೆರಿಕದ ಕಾಂಗ್ರೆಸ್‌ ಆರು ಮಸೂದೆ
ಗಳನ್ನು ಅಂಗೀಕರಿಸಲು ಸಿದ್ಧತೆ ನಡೆಸಿರುವುವಂತೆಯೇ, ಅಂತಹ ಕ್ರಮಕ್ಕೆ ಮುಂದಾಗದಂತೆ ಅಮೆರಿಕ ಸಂಸದರಿಗೆ ಭಾರತ ಮನವಿ ಮಾಡಿದೆ.

ಈ ವಿಚಾರದಲ್ಲಿ ಭಾರತ ಹೊಂದಿರುವ ಆತಂಕವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅಮೆರಿಕದ ಸಂಸದರ ನಿಯೋಗದೆದುರು ಮಂಗಳವಾರ ವ್ಯಕ್ತಪಡಿಸಿದ್ದಾರೆ.‌

ವಿಜ್ಞಾನ, ಬಾಹ್ಯಾಕಾಶ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಮೆರಿಕ ಸದನ ಸಮಿತಿಯ 9 ಸದಸ್ಯರ ನಿಯೋಗವು ಮಂಗಳವಾರ ನವದೆಹಲಿಯಲ್ಲಿ ಸುಷ್ಮಾ ಸ್ವರಾಜ್‌ ಅವರನ್ನು ಭೇಟಿ ಮಾಡಿದ್ದು,  ಎಚ್‌1ಬಿ ವೀಸಾ ಮೇಲೆ ನಿಯಂತ್ರಣ ಹೇರುವ ಅಮೆರಿಕ ಕಾಂಗ್ರೆಸ್‌ ಯತ್ನಕ್ಕೆ ವಿರುದ್ಧವಾಗಿ ಎರಡೂ ಪಕ್ಷಗಳೂ ಬೆಂಬಲ ನೀಡುತ್ತವೆ ಎಂಬ ನಿರೀಕ್ಷೆಯಲ್ಲಿ ಭಾರತ ಇದೆ ಎಂದು ಸುಷ್ಮಾ ಅವರು ಈ ಸಂದರ್ಭದಲ್ಲಿ ನಿಯೋಗಕ್ಕೆ ತಿಳಿಸಿದ್ದಾರೆ.

ಸದನ ಸಮಿತಿ ಅಧ್ಯಕ್ಷ ಲಾಮರ್‌ ಸ್ಮಿತ್‌ ನೇತೃತ್ವದ, ಎರಡೂ ಪಕ್ಷಗಳ ಸದಸ್ಯರನ್ನು ಹೊಂದಿರುವ ನಿಯೋಗ ಭಾರತ ಪ್ರವಾಸದಲ್ಲಿದ್ದು, ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT