‘ರಚನಾತ್ಮಕ ಕಾರ್ಯಕ್ರಮವಾಗಲಿ...’

ಮಂಗಳವಾರ, ಜೂನ್ 25, 2019
29 °C

‘ರಚನಾತ್ಮಕ ಕಾರ್ಯಕ್ರಮವಾಗಲಿ...’

Published:
Updated:
‘ರಚನಾತ್ಮಕ ಕಾರ್ಯಕ್ರಮವಾಗಲಿ...’

ಬೆಂಗಳೂರು: ಅತಿಯಾದ ಮಳೆಯಿಂದಾಗಿ ರಾಜ್ಯದಲ್ಲಿ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ, ರಾಜ್ಯದ ಹಣಕಾಸಿನ ಸ್ಥಿತಿಯೂ ಚೆನ್ನಾಗಿಲ್ಲ. ಇಂಥ ಸ್ಥಿತಿಯಲ್ಲಿ ವಿಧಾನಸೌಧದ ವಜ್ರಮಹೋತ್ಸವ ಆಚರಣೆಗಾಗಿ ದುಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

‘ಅವಿವೇಕದ ಕೆಲಸ’

ವಿಧಾನಸೌಧಕ್ಕೆ 75 ವರ್ಷ ತುಂಬುತ್ತಿರುವುದು ನಮ್ಮೆಲ್ಲರಿಗೂ ಖುಷಿಯ ವಿಚಾರ. ಅದನ್ನು ಒಂದು ದಿನ ಮರೆತು ಹೋಗುವ ಕಾರ್ಯಕ್ರಮವ ನ್ನಾಗಿ ರೂಪಿಸಿ ರುವುದು ಅವಿವೇಕತನದ ಕೆಲಸವೇ ಸರಿ. ತಜ್ಞರ ಜೊತೆಗೆ ಚರ್ಚಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ್ದರೆ, ಜನರು ಬೆಂಬಲವಾಗಿ ನಿಲ್ಲುತ್ತಿದ್ದರು.

–ಹಿತೇಶ್‌, ಸಾಫ್ಟ್‌ವೇರ್‌ ಉದ್ಯೋಗಿ

***

‘ದುಂದು ವೆಚ್ಚ ಬೇಡ’

ವಿಧಾನಸೌಧದ ವಜ್ರಮಹೋತ್ಸವದ ಕಾರ್ಯಕ್ರಮ ಅಗತ್ಯವೇ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಸಮಯದಲ್ಲಿ 1983ರಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಭೀಕರ ಬರಗಾಲ ಇತ್ತು. ಆಗಲೂ ಈ ರೀತಿಯ ಮಾತುಗಳು ಕೇಳಿ ಬಂದಿದ್ದವು. ಆಗ ಶಿವರಾಮ ಕಾರಂತರು ಒಂದು ಮಾತು ಹೇಳಿದ್ದರು. ‘ಬರಗಾಲ ಇದೆ ಎಂದು ಹಬ್ಬ, ಉತ್ಸವಗಳ ಆಚರಣೆಯನ್ನು ಬಿಡುತ್ತೇವೆಯೇ? ಇಲ್ಲವಲ್ಲ, ಹಾಗೆಯೇ ಸಾಂಸ್ಕೃತಿಕ ಮಹತ್ವವಿರುವ ಕಾರ್ಯಕ್ರಮಗಳು ನಡೆಯಬೇಕು’ ಎಂದಿದ್ದರು.

ವಿಧಾನಸೌಧ ವಜ್ರಮಹೋತ್ಸವ ಒಂದು ಸಾಂಸ್ಕೃತಿಕವಾಗಿ ಮಹತ್ವದ ದಿನ. ಅದಕ್ಕಾಗಿ ಕಾರ್ಯಕ್ರಮ ರೂಪಿಸುವುದು ಅಗತ್ಯ. ಆದರೆ, ಅದು ರಚನಾತ್ಮಕವಾಗಿ ಇರಬೇಕೇ ಹೊರತು ದುಂದು ವೆಚ್ಚಕ್ಕೆ ದಾರಿಯಾಗಬಾರದು.

–ಆರಿಫ್‌ ರಾಜಾ, ಕವಿ

***

‘ವಿವೇಕದಿಂದ ಯೋಜನೆ ರೂಪಿಸಿ’

ವಿಧಾನಸೌಧದ ವಜ್ರಮಹೋತ್ಸವ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಹ ಕಾರ್ಯಕ್ರಮವಾಗಬೇಕು. ಹಣ ಇದೆ ಎಂದು ಏನಾದರೊಂದು ಮಾಡಿಬಿಡಬೇಕು ಎನ್ನುವ ಮನಸ್ಥಿತಿ

ಸರಿಯಲ್ಲ. ಈ ರೀತಿಯ ಕಾರ್ಯಕ್ರಮಗಳನ್ನು ಸ್ವಲ್ಪ ವಿವೇಕದಿಂದ ರೂಪಿಸಬೇಕು. ಒಂದಿಷ್ಟು ಜನರೊಂದಿಗೆ ಚರ್ಚೆ ಮಾಡಿ ಕಾರ್ಯಕ್ರಮದ ಕ್ರಿಯಾ ಯೋಜನೆ

ರೂಪಿಸಬೇಕಿತ್ತು.

ರೋರಿಕ್‌ ಎಸ್ಟೇಟ್‌ ಈಗ ಸರ್ಕಾರಕ್ಕೆ ಸೇರಿದೆ. 400 ಎಕರೆ ಪ್ರದೇಶವಿರುವ ಆ ಜಾಗದಲ್ಲಿ ಒಂದು ಕಲಾಕೇಂದ್ರ ಸ್ಥಾಪಿಸಬಹುದು. ಆ ಮೂಲಕ ವಜ್ರಮಹೋತ್ಸವವನ್ನು ಸಂಭ್ರಮಿಸಬಹುದು. ಒಂದು ಕೆಲಸ ಸಾಕಷ್ಟು ಜನರಿಗೆ ಪ್ರೇರಣೆ ಆಗಬೇಕು

–ಎಂ.ಎಸ್‌. ಮೂರ್ತಿ, ಕಲಾವಿದ

***

‘ಟ್ರಾಫಿಕ್‌ ಸಮಸ್ಯೆ: ಪರಿಹಾರ ಹುಡುಕಿ’

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಯಾವುದಾದರೂ ಕ್ರಮ ಕೈಗೊಳ್ಳುವುದಕ್ಕೆ ವಜ್ರಮಹೋತ್ಸವ ದಾರಿಯಾಗಬಹುದಿತ್ತು. ಮೆಟ್ರೊ ಕಾಮಗಾರಿಗೆ ಇನ್ನಷ್ಟು ವೇಗ ನೀಡ ಬಹುದಿತ್ತು. ರಸ್ತೆಗಳನ್ನು ದುರಸ್ತಿಗೊಳಿಸಬಹುದಿತ್ತು ಹೀಗೆ ಅನೇಕ ಕೆಲಸಗಳನ್ನು ಈ ನೆಪದಲ್ಲಿ ಮಾಡಲು ಸಾಧ್ಯವಿತ್ತು.

–ವಿ. ದೀಪಾ, ಸಾಫ್ಟ್‌ವೇರ್‌ ಉದ್ಯೋಗಿ

***

‘ರೈತರ ಬೆಳೆಗೆ ಪರಿಹಾರ ನೀಡಿ’

ಬಹಳ ವರ್ಷಗಳ ನಂತರ ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಅನೇಕ ರೈತರ ಬೆಳೆ ಹಾನಿಯಾಗಿದೆ.

ಅವರಿಗೆ ಪರಿಹಾರ ನೀಡುವ ಮೂಲಕ ರೈತರೊಂದಿಗೆ ವಜ್ರಮಹೋತ್ಸವ ಸಂಭ್ರಮಾಚರಣೆ ಮಾಡಬಹುದಿತ್ತು. ಸಾಲದ ಶೂಲದಲ್ಲಿ ಸಾಕಷ್ಟು ರೈತರು ಸಿಲುಕಿದ್ದಾರೆ. ಅವರೆಲ್ಲರ ಸಾಲ ಮನ್ನಾ ಮಾಡಿ, ಆ ಖುಷಿಯಲ್ಲಿ ವಜ್ರಮಹೋತ್ಸವ ಆಚರಿಸುವಂತೆ ಆಗಿದ್ದರೆ ಜನರ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಬರುತ್ತಿತ್ತು.

–ಜಿ.ಕೆ. ಮಂಜುನಾಥ್‌, ಉದ್ಯೋಗಿ

***

ವಜ್ರಮಹೋತ್ಸವಕ್ಕೆ ಏನೆಲ್ಲ ಮಾಡಬಹುದು

* ವಿಧಾನಸೌಧ ಇತಿಹಾಸ ದಾಖಲಿಸುವ ಕೆಲಸ ಮಾಡಬಹುದಿತ್ತು

* ನಗರದಲ್ಲಿ ಬೃಹತ್‌ ಉದ್ಯಾನ ನಿರ್ಮಿಸಬಹುದು

* ಬಾಳಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸಬಹುದು

* 1,000 ಶೌಚಾಲಯಗಳನ್ನು ಕಟ್ಟಬಹುದಿತ್ತು

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry