ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ನೃತ್ಯದಲ್ಲಿ ಮಿಂದ ಲಂಬಾಣಿ ಮಹಿಳೆಯರು

Last Updated 22 ಅಕ್ಟೋಬರ್ 2017, 7:42 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ದೀಪಾವಳಿಯನ್ನು ಲಂಬಾಣಿ ಸಮುದಾಯದ ಜನರು ಅತ್ಯಂತ ಸಡಗರದಿಂದ ಆಚರಿಸಿದರು. ಶಹಾಪುರ ತಾಲ್ಲೂಕಿನ ಹೋತಪೇಟೆ ದಿಗ್ಗಿ ತಾಂಡಾದಲ್ಲಿ ಬೆಳಕಿನ ಹಬ್ಬದ ವೈಭವ ನಡೆಯಿತು.

ಬುಧವಾರ ಗ್ರಾಮದ ಪ್ರತಿಯೊಬ್ಬರ ಮನೆಯಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಹಾಕಿ ತಂಗಟೆ ಹೂಗಳಿಂದ ಸಿಂಗರಿಸಲಾಗಿತ್ತು. ಗುರುವಾರ ಕಂಕಾಳಿ (ಮಹಾಕಾಳಿ) ದೇವಿಯನ್ನು ಅಲಂಕರಿಸಿ ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿ ಪೂಜೆ ನಡೆಸಲಾಯಿತು.

ಅಂದು ಗ್ರಾಮದಲ್ಲಿ ಲಂಬಾಣಿ ಯುವತಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪ ಬೆಳಗುವ ಮೂಲಕ ಸಾಂಪ್ರದಾಯಿಕ ‘ಮೇರಾ’ ಆಚರಣೆ ನಡೆಸಿದರು. ಕೆಲವು ಯುವತಿಯರು ಲಂಗದಾವಣಿ ತೊಟ್ಟು ಲಂಬಾಣಿ ನೃತ್ಯ ಮಾಡುವ ಮೂಲಕ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.

ಮಧ್ಯ ರಾತ್ರಿವರೆಗೂ ಯುವತಿಯರು ದೀಪಗಳನ್ನು ಹೊತ್ತು ಮನೆಮನೆಗಳಿಗೆ ಹೋಗಿ ‘ಮೇರಾ’ ಬೆಳಗಿದರು. ಲಂಬಾಣಿ ಮಹಿಳೆಯರು ಕೂಡ ಹಬ್ಬದ ಅಂಗವಾಗಿ ಗ್ರಾಮದ ಸೇವಾಲಾಲ್‌ ದೇಗುಲದ ಬಳಿ ಸಾಂಪ್ರದಾಯಿಕ ಲಂಬಾಣಿ ನೃತ್ಯ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT