ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಕ್ಯಾಮೆರಾ ಬೇಕಿಲ್ಲ; ಐಫೋನ್‌ ಇದ್ರೆ ಸಾಕಲ್ಲ!

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಮಾ ಯೇ ಸಿನಿಮಾ ಹೈ’ ಇದು ಒಂದು ಸಿನಿಮಾದ ಹೆಸರಷ್ಟೇ ಅಲ್ಲ, ಆ ಸಿನಿಮಾದ ಕುರಿತ ಉದ್ಗಾರವಾಗಿಯೂ ನೋಡಬಹುದು. ಸಿನಿಮಾ ಎಂದರೆ ಸಿಕ್ಕಾಪಟ್ಟೆ ಹಣ ಬೇಕು. ಆಧುನಿಕ ತಂತ್ರಜ್ಞಾನ, ಸಲಕರಣೆಗಳು ಬೇಕು, ವಿಶೇಷ ಪರಿಣತಿ ಬೇಕು ಎಂಬೆಲ್ಲ ಮಾತುಗಳಿಗೆ ಅಪವಾದವೆಂಬಂತೆ ಐಫೋನ್‌ನಲ್ಲಿ ಚಿತ್ರೀಕರಿಸಿ ಸಿನಿಮಾ ಮುಗಿಸಿದ್ದಾರೆ ನಿರ್ದೇಶಕ ಸಂದೀಪ್‌ ಮಲಾನಿ. ಆ ಸಿನಿಮಾದ ಹೆಸರೇ ‘ಮಾ ಯೇ ಸಿನಿಮಾ ಹೈ’. ಅಂದ ಹಾಗೆ ಇದು ಹಿಂದಿ ಭಾಷೆಯ ಸಿನಿಮಾ.

ಈ ಚಿತ್ರದ ನಿರ್ದೇಶನವಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣದ ಜವಾಬ್ದಾರಿಗಳನ್ನೂ ಸಂದೀಪ್‌ ವಹಿಸಿಕೊಂಡಿದ್ದಾರೆ. ಅವರು ಕನ್ನಡಿಗ. ಹಾಗೆಯೇ ಅವರು ಸಿನಿಮಾ ಮಾಡಲು ಆಯ್ದುಕೊಂಡಿರುವ ವಿಷಯವೂ ತುಂಬ ಸೂಕ್ಷ್ಮವಾದದ್ದು. ತನ್ನನ್ನು ಕಡೆಗಣಿಸುವ ಮಗನ ಪ್ರೇಮಕ್ಕಾಗಿ ಹಂಬಲಿಸುವ ತಾಯಿಯ ದಾರುಣ ಕಥೆಯನ್ನು ತೆರೆಯ ಮೇಲೆ ಅವರು ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರು, ಮಂಗಳೂರು, ಮುಂಬೈಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವೆಂಕಟೇಶ್‌ಕಾರ್ತಿಕ್‌ ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆದು ಸಂಗೀತ ಸಂಯೋಜಿಸಿದ್ದಾರೆ. ಮೀನಾ ಮಲಾನಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಏಳು ನಾಯಕರಿದ್ದಾರೆ. ರಂಜೀತ್‍ ಜಾ, ಭರತ್‍ ಲಕ್ಷೀಕಾಂತ್, ಮಹೇಂದ್ರ ಪಾಂಡೆ, ವಿಶಾಲಿಗಾನಿ, ಮಹೇಶ್‍ ಅಲ್ದುಂ, ಆಕಾಶ್‍ ಅರೋರ, ಶಿವಂಕಟಾರಿಯಾ ಇವರುಗಳಿಗೆ ಸಂಯುಕ್ತಾ ಘೋಷ್, ಶುಭಾ ರಕ್ಷಾ, ಶರಣ್ಯಕೌರ್, ರೇಷ್ಮಾ ಮಲಾನಿ, ಅನಿತಾ ದುಲಂ, ಶೋನ ಲಾಭ್ರ, ವರ್ಷ ಆಚಾರ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತುಳು, ಕೊಂಕಣಿ ಭಾಷೆಗಳ ನೂರು ಕಲಾವಿದರು ನಟಿಸಿರುವುದು ಇನ್ನೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT