ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಬಲಪಂಥದತ್ತ ವಾಲುತ್ತಿರುವ ವಿಶ್ವ: ಆತಂಕ

Published:
Updated:
ಬಲಪಂಥದತ್ತ ವಾಲುತ್ತಿರುವ ವಿಶ್ವ: ಆತಂಕ

ಕೊಪ್ಪಳ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಯ್ಕೆ ಆಗುವುದರೊಂದಿಗೆ ವಿಶ್ವವು ಹೆಚ್ಚೆಚ್ಚು ಬಲಪಂಥದತ್ತ ವಾಲುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಸಿಪಿಐ (ಎಂ) ರಾಜ್ಯ ಘಟಕದ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದ ಸ್ವಾಮಿ ಹೇಳಿದರು.

ನಗರದ ಜ.ಚ.ನಿ ಭವನದಲ್ಲಿ ಈಚೆಗೆ ನಡೆದ ಪಕ್ಷದ 4ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘2014ರ ಲೋಕಸಭಾ ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ನರೇಂದ್ರ ಮೋದಿ ಅವರು ದೇಶಕಂಡ ಅತ್ಯಂತ ಕಡು ಬಲಪಂಥಿಯ ಪ್ರಧಾನಿ’ ಎಂದು ವಿಶ್ಲೇಷಿಸಿದರು.

‘ಬಲಪಂಥಿಯರು ಯತಾಸ್ಥಿತಿವಾದಿಗಳು ಶ್ರೀಮಂರು ಶ್ರೀಮಂತರಾಗಿ, ಬಡವರು ಬಡವರಾಗಿ ಇರಲಿ ಎಂದು ಪ್ರತಿಪಾದಿಸುತ್ತಾರೆ. ಸಮಾಜದಲ್ಲಿರುವ ಸಾಮಾಜಿಕ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೇ ಇರಲಿ ಎನ್ನುತ್ತಾರೆ. ಕಮ್ಯುನಿಸ್ಟ್ ಪಕ್ಷ ಮಾತ್ರ ಸಮಾಜದ ಬದಲಾವಣೆ ಬಯುಸುತ್ತದೆ. ದೇಶದ ಜನರು ಎಡ ಪರ್ಯಾಯವನ್ನು ಗುರುತಿಸಿ ಬೆಂಬಲಿಸಬೇಕಾಗಿದೆ’ ಎಂದರು.

ಕಾರ್ಮಿಕ ಮುಖಂಡ ಸುಂಕಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ ಇದ್ದರು. ಕಾಸೀಂಸಾಬ್‌ ಸರ್ದಾರ್‌ ಸ್ವಾಗತಿಸಿದರು. ಶೇಖಪ್ಪ ಚೌಡ್ಕಿ ವಂದಿಸಿದರು.

ನೂತನ ತಾಲ್ಲೂಕಾ ಸಮಿತಿಗೆ ಕಾಸೀಂಸಾಬ್‌ ಸರ್ಧಾರ್‌(ಕಾರ್ಯದರ್ಶಿ), ಸುಂಕಪ್ಪ ಗದಗ, ಬಸವರಾಜ ಗೋನಾಳ, ಅಡಿವೆಪ್ಪ ಬುಕ್ಕಸಾಗರ, ಹನುಮೇಶ ಕಲ್ಲಮಂಗಿ, ಗೌಸುಸಾಬ್‌ ನದಾಫ್, ಹನುಮಂತಪ್ಪ, ಹುಲುಗಪ್ಪ ಹುಲಗಿ, ಮಲ್ಲಮ್ಮ ಬಿಸರಳ್ಳಿ ಸದಸ್ಯರಾಗಿ ಆಯ್ಕೆಯಾದರು. .

Post Comments (+)