ಫ್ರಿಜ್‌ ಸ್ಫೋಟ: ಇಬ್ಬರು ಬಾಲಕರ ಸಾವು

ಸೋಮವಾರ, ಜೂನ್ 17, 2019
22 °C

ಫ್ರಿಜ್‌ ಸ್ಫೋಟ: ಇಬ್ಬರು ಬಾಲಕರ ಸಾವು

Published:
Updated:
ಫ್ರಿಜ್‌ ಸ್ಫೋಟ: ಇಬ್ಬರು ಬಾಲಕರ ಸಾವು

ವಿಜಯಪುರ: ತಾಲ್ಲೂಕಿನ ಉತ್ನಾಳ ಗ್ರಾಮದ ಮನೆಯೊಂದರಲ್ಲಿ ಶನಿವಾರ ಫ್ರಿಜ್‌ ಸ್ಫೋಟಗೊಂಡು, ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಸಂಜೀವ ಈರಪ್ಪ ಹೂಗಾರ (12), ಪ್ರಮೋದ ಪ್ರಕಾಶ ಹೂಗಾರ (5) ಮೃತಪಟ್ಟವರು.

ಸ್ಫೋಟದ ರಭಸಕ್ಕೆ ಸಂಜೀವ ದೇಹ ಛಿದ್ರಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಇವರಿಬ್ಬರೂ ಸಹೋದರರ ಮಕ್ಕಳು. ಹೂಗಾರ ಕುಟುಂಬ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿತ್ತು. ತಂಪು ಪಾನೀಯ ಮಾರಾಟಕ್ಕಾಗಿ ಕೋಕೊ ಕೋಲಾ ಕಂಪೆನಿ ಫ್ರಿಜ್‌ ನೀಡಿತ್ತು. ಅಂಗಡಿ ಮುಚ್ಚಿಹೋದ ಬಳಿಕ ಫ್ರಿಜ್‌ ಅನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರು. ಶನಿವಾರ ಈ ಬಾಲಕರಿಬ್ಬರೂ ಅದರ ಬಳಿ ಇದ್ದ ವೇಳೆ ಅದು ಸಿಡಿದಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವಿಜಯಪುರ ಡಿವೈಎಸ್‌ಪಿ ಡಿ.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry