ಸರಿಗಮಪ ಲಿಟಲ್‌ ಚಾಂಪ್ಸ್‌: ಪ್ರಶಸ್ತಿ ಹಂಚಿಕೊಂಡ ಶ್ರೇಯನ್‌, ಅಂಜಲಿ

ಸೋಮವಾರ, ಜೂನ್ 17, 2019
27 °C

ಸರಿಗಮಪ ಲಿಟಲ್‌ ಚಾಂಪ್ಸ್‌: ಪ್ರಶಸ್ತಿ ಹಂಚಿಕೊಂಡ ಶ್ರೇಯನ್‌, ಅಂಜಲಿ

Published:
Updated:
ಸರಿಗಮಪ ಲಿಟಲ್‌ ಚಾಂಪ್ಸ್‌: ಪ್ರಶಸ್ತಿ ಹಂಚಿಕೊಂಡ ಶ್ರೇಯನ್‌, ಅಂಜಲಿ

ರಾಜಸ್ಥಾನ: ಜೀ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋ ‘ಸರಿಗಮಪ ಲಿಟಲ್ ಚಾಂಪ್ಸ್‌–2017’ನಅಂತಿಮ ಸುತ್ತಿನಲ್ಲಿ ಪಶ್ಚಿಮ ಬಂಗಾಳದ ಶ್ರೇಯನ್‌ ಭಟ್ಟಾಚಾರ್ಯ ಮತ್ತು ಮಹಾರಾಷ್ಟ್ರದ ಅಂಜಲಿ ಗಾಯಕವಾಡ್‌ ವಿಜೇತರಾಗಿದ್ದಾರೆ.

ಸತತ ಹತ್ತು ತಿಂಗಳಿಂದ ಮಕ್ಕಳ ಮಧುರ ಕಂಠ ಮತ್ತು ಇಂಪಾದ ಗಾಯನದಿಂದ ಜನಮನ ಸೂರೆಗೊಂಡಿದ್ದ ರಿಯಾಲಿಟಿ ಷೋನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಗೆ ಅಮೃತಸರದ ದ್ರೂನ್‌ ಟಿಕ್ಕೂ, ವಿಶಾಖಪಟ್ಟಣದ ಷಣ್ಮುಖಪ್ರಿಯ, ಕೇರಳದ ವೈಷ್ಣವ ಗಿರೀಶ್‌, ಕೋಲ್ಕತ್ತಾದ ಸೋನಾಕ್ಷಿ ಕರ್‌ ಸೇರಿದಂತೆ ಆರು ಸ್ಪರ್ಧಿಗಳು ಆಯ್ಕೆಯಾಗಿದ್ದರು. ರಿಯಾ ಬಿಸ್ವಾಸ್‌ ಮತ್ತು ಯಮುನಾ ಅಂತಿಮ ಸುತ್ತಿನಲ್ಲಿ ಹೊರಬಿದ್ದಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry