ನವದೆಹಲಿ: ದೆಹಲಿ ಮಾಲಿನ್ಯ ಪರಿಸ್ಥಿತಿ ಬಣ್ಣಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಗಜಲ್ ಮೊರೆ ಹೋಗಿದ್ದಾರೆ. ‘ಸೀನೆ ಮೇ ಜಲನ್, ಆಂಖೊ ಮೇ ತೂಫಾನ್ ಸಾ ಕ್ಯೂಂ ಹೈ’ (ಎದೆಯಲ್ಲಿ ಉರಿ, ಕಣ್ಣಲ್ಲಿ ಬಿರುಗಾಳಿ ಬೀಸಿದಂತೆ ಭಾಸವಾಗುತ್ತಿದೆ ಏಕೆ?) ಎಂಬ ಶಹರಿಯಾರ್ ಅವರ ಗಜಲ್ ಅನ್ನು ದೆಹಲಿ ಪರಿಸ್ಥಿತಿ ಬಣ್ಣಿಸಲು ಬಳಸಿಕೊಂಡಿದ್ದಾರೆ.

‘ಕ್ಯಾ ಬತಾಯೇಂಗೆ ಸಾಹೇಬ್, ಸಬ್ ಜಾನ್ ಕರ್ ಅಂಜಾನ್ ಕ್ಯೂಂ ಹೈ’ (ಎಲ್ಲ ಗೊತ್ತಿದ್ದೂ, ಗೊತ್ತಿಲ್ಲದವರಂತೆ ಇರುವುದು ಏಕೆ ಹೇಳುತ್ತೀರಾ ಸಾಹೇಬರೆ?) ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ದೆಹಲಿ ಮಾಲಿನ್ಯಕ್ಕೆ ಪರಿಹಾರ ಕಂಡು ಹಿಡಿಯುವ ಬದಲು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವ ಪಂಜಾಬ್, ಹರಿಯಾಣ ಮತ್ತು ದೆಹಲಿ ಮುಖ್ಯಮಂತ್ರಿಗಳ ಕೆಸರೆರಚಾಟವನ್ನು ಅವರು ಈ ರೀತಿ ಲೇವಡಿ ಮಾಡಿದ್ದಾರೆ.

ದೇಶದಲ್ಲಿ ವಾಯು ಮಾಲಿನ್ಯದಿಂದ ಒಟ್ಟು 18 ಲಕ್ಷ ಮಂದಿ ಸಾವನ್ನಪ್ಪಿದ ಪತ್ರಿಕಾ ವರದಿಯನ್ನು ಅವರು ಟ್ವೀಟ್ ಜತೆ ಟ್ಯಾಗ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.