ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳಕಾಯದ ಸುಂದರಿಗೆ ವಿಶ್ವ ಗೆಲ್ಲುವ ಕನಸು

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಳಕುವ ಬಳ್ಳಿಯಂತಿರುವ ಈ ಸುಂದರಿಯ ಹೆಸರು ದೃಶ್ಯ ಗಿರೀಶ್. ಹಾಲು ಬಿಳುಪಿನ ಮೈಬಣ್ಣದ ದೃಶ್ಯ ಕೊಡಗು ಮೂಲದವರು. ಆದರೆ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಸದ್ಯ ಜೆಡಿ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್‌ ಟೆಕ್ನಾಲಜಿಯಲ್ಲಿ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ.

ರೂಪದರ್ಶಿಯಾಗುವ ಕನಸು ಬಾಲ್ಯದಿಂದಲೂ ಇತ್ತು. ನೋಡಲು ತೆಳ್ಳಗೆ, ಎತ್ತರಕ್ಕೆ ಇದ್ದ ಇವರನ್ನು ಕಂಡ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ‘ನೀನು ಮಾಡೆಲ್ ಆಗಬಹುದು’ ಎನ್ನುತ್ತಿದ್ದರು. ಅದು ಅವರಲ್ಲಿ ಮಾಡೆಲಿಂಗ್ ಕನಸು ಮೂಡಲು ಕಾರಣವಾಯಿತು.

‘ನನ್ನ ಕನಸು, ನನ್ನ ಕಾರ್ಯಕ್ಷೇತ್ರ ಎಲ್ಲವೂ ಇದೇ’ ಎಂದು ಅಂದುಕೊಂಡ ದೃಶ್ಯ ಮಾಡೆಲ್‌ಗಳ ದಿನಚರಿಯನ್ನು ಯೂಟ್ಯೂಬ್‌ನಲ್ಲಿ ನೋಡಿ ಅನುಸರಿಸಲು ಆರಂಭಿಸಿದರು. ಆ ವಿಡಿಯೊಗಳ ಮೂಲಕ ಮಾಡೆಲ್‌ಗಳು, ಸಿನಿಮಾ ನಟ–ನಟಿಯರು ಹೇಗೆ ದೇಹ ಹಾಗೂ ತ್ವಚೆಯ ಅಂದ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿದು, ಅನುಸರಿಸಲು ಆರಂಭಿಸಿದರು. ಹದಿನಾರನೇ ವಯಸ್ಸಿನಲ್ಲಿಯೇ ಜಿಮ್‌, ವ್ಯಾಯಾಮ, ಡಯೆಟ್ ಶುರುವಾಗಿತ್ತು.

ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಫ್ಯಾಷನ್ ಜಗತ್ತಿಗೆ ಪ್ರವೇಶಿಸಿದ್ದ ಇವರ ಕನಸಿಗೆ ನೀರೆರೆದು ಪೋಷಿಸಿದ್ದು ‘ಸಿಲ್ವರ್ ಸ್ಟಾರ್’ ಸಂಸ್ಥೆ. ‘ಸದ್ಯ ನಾನು ‘ಮಿಸ್‌ ಇಂಡಿಯಾ ಗಾರ್ಜಿಯೆಸ್‌’ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ’ ಎಂದು ತಮ್ಮ ಮಾಡೆಲಿಂಗ್ ಲೋಕದ ಪಯಣವನ್ನು ಹೆಮ್ಮೆಯಿಂದ ವಿವರಿಸುತ್ತಾರೆ.

ಬೆಂಗಳೂರಿನಲ್ಲಿ ಫ್ಯಾಷನ್ ಜಗತ್ತಿಗೆ ಕಾಲಿಡಲು ಸಾಕಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ದೃಶ್ಯ, ಈಗಾಗಲೇ ಕೆಲ ಜಾಹೀರಾತುಗಳಲ್ಲಿ ನಟಿಸಿದ್ದಾರೆ.

‘ನನಗೆ ಇಲ್ಲಿಯವರೆಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಲು ಅವಕಾಶಗಳು ಬಂದಿಲ್ಲ, ಅವಕಾಶ ದೊರೆತರೆ ಖಂಡಿತಾ ನಟಿಸುತ್ತೇನೆ. ರೂಪದರ್ಶಿಯಾಗಿ ತುಂಬಾ ದಿನಗಳವರೆಗೆ ಇದೇ ಕ್ಷೇತ್ರದಲ್ಲಿ ಮುಂದುವರಿಯಲು ಉತ್ತಮ ವ್ಯಕ್ತಿತ್ವ ಇರಬೇಕು. ಸೊಕ್ಕು ಅಥವಾ ಅಸಡ್ಡೆ ಪ್ರದರ್ಶಿಸಿದರೆ ಇಲ್ಲಿ ಉಳಿಗಾಲವಿಲ್ಲ. ಸಂವಹನದ ಕಲೆ ಕೂಡ ರೂಪದರ್ಶಿಯಾಗಲೂ ಪ್ಲಸ್‌ಪಾಯಿಂಟ್’ ಎನ್ನುವುದು ಇವರ ಅಭಿಪ್ರಾಯ.

ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಲು ಐಶ್ವರ್ಯಾ ರೈ ಸ್ಫೂರ್ತಿಯಾದರೆ, ವಿಶ್ವಸುಂದರಿ ಪಟ್ಟ ಪಡೆದ ಮಾನುಷಿ ಛಿಲ್ಲರ್ ಇವರಿಗೆ ರೋಲ್ ಮಾಡೆಲ್ ಅಂತೆ.

ನಿಮ್ಮ ತ್ವಚೆ ಹಾಗೂ ದೇಹಸಿರಿಯ ಗುಟ್ಟೇನು ಎಂದು ಕೇಳಿದರೆ ‘ತ್ವಚೆಯ ಬಗ್ಗೆ ಹೆಚ್ಚೇನು ಗಮನ ಹರಿಸುವುದಿಲ್ಲ. ಚರ್ಮದ ಹೊಳಪು ಹೆಚ್ಚಲು ಮುಖ ತೊಳೆದ ಮೇಲೆ ಟೋನಿಂಗ್ ಮಾಡಿ ಮಾಯಿಶ್ಚರೈಸರ್ ಹಚ್ಚುತ್ತೇನೆ. ಸನ್‌ಸ್ಕ್ರೀನ್ ಲೋಷನ್ ಬಳಸದೆ ಹೊರಗೆ ಹೋಗುವುದಿಲ್ಲ. ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆದುಬಿಡುತ್ತೇನೆ. ಜಂಕ್ ಹಾಗೂ ಸಿಹಿ ಖಾದ್ಯಗಳನ್ನು ತಿನ್ನುವುದಿಲ್ಲ’ ಎನ್ನುತ್ತಾರೆ.

ಈ ಕನಸು ಕಂಗಳ ಸುಂದರಿಗೆ ವಿಶ್ವಸುಂದರಿಯಾಗುವ ಕನಸು ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT