ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಪ್ರೀತ್‌ಗೆ ಎರಡು ಪಂದ್ಯ ನಿಷೇಧ

Last Updated 5 ಡಿಸೆಂಬರ್ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಗೋಲ್‌ಕೀಪರ್‌ ಗುರು‍ಪ್ರೀತ್‌ ಸಿಂಗ್‌ ಸಂಧು ಮೇಲೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಎರಡು ಪಂದ್ಯಗಳ ನಿಷೇಧ ಹೇರಿದೆ.

ಜೊತೆಗೆ ₹ 3 ಲಕ್ಷ ದಂಡವನ್ನೂ ವಿಧಿಸಿದೆ. ನವೆಂಬರ್‌ 30ರಂದು ಗೋವಾದ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಎಫ್‌ಸಿ ಗೋವಾ ಎದುರಿನ ಪಂದ್ಯದ ವೇಳೆ ಗುರುಪ್ರೀತ್‌ ಒರಟು ಆಟ ಆಡಿದ್ದರು. ಈ ಸಂಬಂಧ ಪಂದ್ಯದ ರೆಫರಿ ಎಐಎಫ್‌ಎಫ್‌ ಶಿಸ್ತು ಸಮಿತಿಗೆ ದೂರು ನೀಡಿದ್ದರು.

‘ಗುರುಪ್ರೀತ್‌, ಐಎಸ್‌ಎಲ್‌ ಪಂದ್ಯದ ವೇಳೆ ಎಐಎಫ್‌ಎಫ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ನಿಷೇಧ ಹೇರಲಾಗಿದೆ. ಇದು ತಕ್ಷಣದಿಂದಲೇ ಜಾರಿಯಾಗಲಿದ್ದು, ₹3 ಲಕ್ಷ ದಂಡವನ್ನು ಅವರು 10 ದಿನಗಳ ಒಳಗಾಗಿ ಎಐಎಫ್‌ಎಫ್‌ಗೆ ಪಾವತಿಸಬೇಕು’ ಎಂದು ಶಿಸ್ತು ಸಮಿತಿ ತಿಳಿಸಿದೆ.

ಗುರುಪ್ರೀತ್‌, ಡಿಸೆಂಬರ್‌ 8ರಂದು ಗುವಾಹಟಿಯಲ್ಲಿ ನಡೆಯುವ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ಮತ್ತು ಡಿಸೆಂಬರ್‌ 14 ರಂದು ಪುಣೆಯಲ್ಲಿ ಜರುಗುವ ಎಫ್‌ಸಿ ಪುಣೆ ಸಿಟಿ ವಿರುದ್ಧದ ಪಂದ್ಯಗಳಲ್ಲಿ ಆಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT