ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಫೋಟೊ ಪ್ರಿಂಟರ್‌

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳಲ್ಲಿ ಸೆರೆಹಿಡಿದ ಚಿತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ ಪ್ರಿಂಟ್‌ ಮಾಡಬಲ್ಲ ‘ಪೊಲಾರಾಯ್ಡ್‌ ಇನ್‌ಸ್ಟಾ ಶೇರ್ ಪ್ರಿಂಟರ್’ ಮಾರುಕಟ್ಟೆಗೆ ಬಂದಿದೆ. ಸದ್ಯಕ್ಕೆ ಇದು ಮೋಟೊ ಝೆಡ್‌ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ.

ಇದನ್ನು ಬಳಸುವುದೂ ಸುಲಭ. ನಿಮ್ಮ ಮೋಟೊ ಫೋನ್‌ಗೆ ಇನ್‌ಸ್ಟಾ ಶೇರ್‌ ಪ್ರಿಂಟರ್‌ ಅಟ್ಯಾಚ್‌ ಮಾಡಿದರೆ ಆಯಿತು. ಈ ಹಿಂದೆ ಧ್ವನಿವರ್ಧಕ ಹಾಗೂ ಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಮೋಟೊ ಫೋನುಗಳಿಗೆ ಅಚ್ಯಾಚ್‌ ಮಾಡಬಹುದಿತ್ತು. ಈ ಬಾರಿ ಪ್ರಿಂಟರ್‌ ಅಟ್ಯಾಚ್‌ ಮಾಡುವ ಅವಕಾಶ ಸಿಕ್ಕಿದೆ.

ಫೋಟೊ ಪ್ರಿಂಟ್ ಮಾಡಲು ಪೊಲಾರಾಯ್ಡ್‌ ಝಿಂಕ್‌ ಪೇಪರ್‌ ಬಳಕೆಯಾಗುತ್ತದೆ. ಇದು ಕಲೆರಹಿತ ಹಾಗೂ ಜಲನಿರೋಧಕವಾಗಿದೆ. ಬೆಲೆ 200 ಡಾಲರ್ (₹13,000).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT