ಕೊಚ್ಚಿ: ಒಖಿ ಚಂಡಮಾರುತದ ಪರಿಣಾಮವಾಗಿ, ಅರಬ್ಬಿ ಸಮುದ್ರದ ಮಿನಿಕೋವ್ ದ್ವೀಪದ ಸಮೀಪ ಇಂಧನ ಕೊರತೆಯಿಂದ ತೊಂದರೆಗೆ ಸಿಲುಕಿದ್ದ ಸಿಂಗಪುರ ಮೂಲದ ಹಡಗಿಗೆ ಭಾರತದ ನೌಕಾಪಡೆ ನೆರವು ನೀಡಿದೆ.

’ಬೆಸ್‌ಪವರ್’ ಹೆಸರಿನ ಹಡಗು ದ್ವೀಪದಿಂದ 35 ನಾಟಿಕಲ್ ಮೈಲು ದೂರದಲ್ಲಿ ತೊಂದರೆಗೆ ಸಿಲುಕಿತ್ತು. ಇದು ಚಂಡಮಾರುತದಿಂದ ಹಾನಿಗೊಳಗಾದವರ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ನೌಕಾಪಡೆಯ ’ಐಎನ್‌ಎಸ್ ಶಾರ್ದೂಲ’ ನೌಕೆಯ ಗಮನಕ್ಕೆ ಬಂದಿತು. ಮಾಲ್ಡೀವ್ಸ್‌ಗೆ ತೆರಳಲು 45 ಟನ್ ಇಂಧನದ ಅಗತ್ಯವಿದೆ ಎಂದು ಬೆಸ್‌ಪವರ್‌ನ ಸಿಬ್ಬಂದಿ ಮನವಿ ಮಾಡಿದ್ದು, ಅವರಿಗೆ ಅದನ್ನು ಪೂರೈಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಸತ್ತವರ ಸಂಖ್ಯೆ 36ಕ್ಕೆ ಏರಿಕೆ (ತಿರುವನಂತಪುರ ವರದಿ): ಕೇರಳ ಕರಾವಳಿಯಲ್ಲಿ ಗುರುವಾರ ಬೆಳಿಗ್ಗೆ ಮೂವರ ಮೃತದೇಹ ಪತ್ತೆಯಾಗಿದೆ. ಇದರಿಂದ, ಒಖಿ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾದಂತಾಗಿದೆ. ಕಾಣೆಯಾಗಿರುವ 96 ಮೀನುಗಾರರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ, ಕೋಯಿಕ್ಕೋಡ್‌ನಿಂದ ಲಕ್ಷದ್ವೀಪಕ್ಕೆ ಪ್ರಯಾಣಿಕರ ಹಡಗು ಸಂಚಾರ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.