3

ಅವಮಾನಕರ ಮಾಲಿನ್ಯ

Published:
Updated:

ವಾಯುಮಾಲಿನ್ಯದ ದೆಸೆಯಿಂದಾಗಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಅಡಚಣೆಯಾದದ್ದು ಅನಪೇಕ್ಷಣೀಯ.

ರಾಷ್ಟ್ರದ ರಾಜಧಾನಿಯಲ್ಲೇ ಈ ಪರಿಸ್ಥಿತಿ ಇರುವುದು ಅವಮಾನಕರ. ಮಾಲಿನ್ಯ ನಿಯಂತ್ರಣ ಮಂಡಳಿಯು ಕಠಿಣ ಕ್ರಮಗಳನ್ನು ಕೈಗೊಂಡು ಮಾಲಿನ್ಯವನ್ನು ಹತೋಟಿಗೆ ತರದಿದ್ದರೆ ಇತರ ರಾಷ್ಟ್ರಗಳ ಜೊತೆಗಿನ ಭಾರತದ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ಉಂಟಾಗಬಹುದು.

‘ಭಾರತದಲ್ಲಿ ವಾಯುಮಾಲಿನ್ಯ ಇರುವುದರಿಂದ ಆ ದೇಶಕ್ಕೆ ಹೋಗಬೇಡಿ’ ಎಂದು ಕೆಲವು ರಾಷ್ಟ್ರಗಳು ತನ್ನ ಪ್ರಜೆಗಳಿಗೆ ಸಲಹೆ ನೀಡಿದರೆ, ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳುವುದರ ಜೊತೆಗೆ ದೇಶಕ್ಕೆ ಅವಮಾನವೂ ಆಗುತ್ತದೆ.

ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸುವುದು, ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದು, ವಾಹನಗಳ ಪೂಲಿಂಗ್‌ನಂತಹ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಒತ್ತು ಕೊಡಬೇಕು. ದೆಹಲಿ ಮಾತ್ರವಲ್ಲ, ಇತರ ನಗರಗಳಲ್ಲೂ ಮಾಲಿನ್ಯ ನಿಯಂತ್ರಣಕ್ಕೆ ಈಗಲೇ ಕ್ರಮ ಕೈಗೊಳ್ಳಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry