7

ನಯನಾ ನಿಶ್ಚಿತಾರ್ಥ

Published:
Updated:
ನಯನಾ ನಿಶ್ಚಿತಾರ್ಥ

ಚಂದನವನದಲ್ಲೀಗ ಮಂಗಳವಾದ್ಯಗಳ ಸದ್ದು. ಸಾಲುಸಾಲು ಮದುವೆಗಳು. ಈ ಪಟ್ಟಿಗೆ ಹೊಸ ಸೇರ್ಪಡೆ ನಟಿ ನಯನಾ ಅವರ ನಿಶ್ಚಿತಾರ್ಥ.ಹೈದರಾಬಾದ್‌ ಮೂಲದ ಚರಣ್‌ತೇಜ್‌ ಈ ಚೆಲುವೆಯ ಮನಕದ್ದ ಚಕೋರ. ಬೆಂಗಳೂರಿನ ವರ್ಲ್ಡ್‌ ಟ್ರೇಡ್‌ ಸೆಂಟರ್‌ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನು ಇದೀಗ ನಯನಾ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ನಯನಾ ಸಂಗಾತಿಯತ್ತ ನೆಟ್ಟಿರುವ ಆಪ್ತನೋಟ ಹತ್ತಾರು ಭಾವಗಳನ್ನು ಸೂಕ್ಷ್ಮವಾಗಿ ದಾಟಿಸುವಂತಿದೆ.ಸುವರ್ಣ ವಾಹಿನಿಯಲ್ಲಿ ಮೂಡಿಬಂದಿದ್ದ ‘ಪ್ಯಾಟೆ ಹುಡ್ಗೀರ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ನಯನಾಗೆ ನಂತರದ ದಿನಗಳಲ್ಲಿ ಬೆಳ್ಳಿತೆರೆಯ ಬಾಗಿಲೂ ತೆರೆದುಕೊಂಡಿತ್ತು. ವಿನಯ್ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ 'ಸಿದ್ಧಾರ್ಥ' ಸೇರಿದಂತೆ ಹಲವು ಸಿನಿಮಾಗಳಿಗೆ ಅವರು ಬಣ್ಣಹಚ್ಚಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry