ಬೆಂಗಳೂರು: ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ತಂಡದವರು ವಿಜಯವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ ಶಾಲಾ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಜೂನಿಯರ್ ಬಾಲಕರ ತಂಡ ವಿಭಾಗದಲ್ಲಿ ಕುಮಾರನ್ ಶಾಲೆ 3–0ರಲ್ಲಿ ಉತ್ತರ ಬಂಗಾಳದ ಟೆಕೊ ಇಂಡಿಯಾ ಗ್ರೂಪ್ ಸ್ಕೂಲ್ ತಂಡವನ್ನು ಮಣಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕೆ.ಜೆ.ಆಕಾಶ್ 11–7, 15–13, 11–9ರಲ್ಲಿ ಸೌಮ್ಯದೀಪ್ ನೆಯೊಗಿ ವಿರುದ್ಧ ಗೆದ್ದರು.

ಎರಡನೇ ಸಿಂಗಲ್ಸ್‌ನಲ್ಲಿ ಸುಜನ್ ಭಾರದ್ವಾಜ್ 8–11, 11–9, 11–5, 11–7ರಲ್ಲಿ ಶ್ರೇಯಾನ್ಸು ಸೇನ್ ಅವರ ಸವಾಲು ಮೀರಿ ನಿಂತು ಕುಮಾರನ್ ಶಾಲೆಗೆ 2–0ರ ಮುನ್ನಡೆ ತಂದುಕೊಟ್ಟರು.

ಡಬಲ್ಸ್ ವಿಭಾಗದಲ್ಲಿ ಸುಜನ್ ಮತ್ತು ಶ್ರೀಕಾಂತ್ ಕಶ್ಯಪ್ ಜೋಡಿ 12–10, 11–8, 9–11, 11–3ರಲ್ಲಿ ಸೌಮ್ಯದೀಪ್ ಮತ್ತು ಶ್ರೇಯಾನ್ಸು ಅವರನ್ನು ಮಣಿಸಿತು.

ಫೈನಲ್‌ನಲ್ಲಿ ಕುಮಾರನ್ ಶಾಲೆ ತಂಡ ಪಶ್ಚಿಮ ಬಂಗಾಳದ ನೈಹತಿ ನರೇಂದ್ರ ವಿದ್ಯಾನಿಕೇತನ ತಂಡದ ವಿರುದ್ಧ ಆಡಲಿದೆ.

ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ನೈಹತಿ ತಂಡ 3–2ರಲ್ಲಿ ಮಹಾರಾಜ ಪಬ್ಲಿಕ್ ಶಾಲೆ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.