ಗುರುವಾರ , ಮಾರ್ಚ್ 4, 2021
17 °C

ಮೋದಿ ಭಾಷಣಗಳಲ್ಲಿ ಗುಜರಾತಿನ ಅಭಿವೃದ್ಧಿಯ ಪ್ರಸ್ತಾಪ ಯಾಕಿಲ್ಲ? : ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

ಮೋದಿ ಭಾಷಣಗಳಲ್ಲಿ ಗುಜರಾತಿನ ಅಭಿವೃದ್ಧಿಯ ಪ್ರಸ್ತಾಪ ಯಾಕಿಲ್ಲ? : ರಾಹುಲ್

ನವದೆಹಲಿ: ಗುಜರಾತಿನ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ಅಭಿವೃದ್ಧಿಯ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

‘ಸತತ 22 ವರ್ಷಗಳಿಂದ ಗುಜರಾತಿನಲ್ಲಿ ಬಿಜೆಪಿ ಸರ್ಕಾರವಿದೆ. ನಾನು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನರೇಂದ್ರ ಮೋದಿ ಅವರ ಭಾಷಣಗಳಲ್ಲಿ ಅಭಿವೃದ್ಧಿ ಪರ ಮಾತುಗಳು ಕಾಣದಿರಲು ಕಾರಣವೇನು?’ ಎಂದು ರಾಹುಲ್ ಕೇಳಿದ್ದಾರೆ.

ರಾಹುಲ್ ಗಾಂಧಿ ಅವರು ಗುಜರಾತಿನಲ್ಲಿ ಚುನಾವಣೆ ಪ್ರಚಾರ ಆರಂಭವಾದ ದಿನದಿಂದ ಟ್ವಿಟರ್‌ನಲ್ಲಿ ‘22 ವರ್ಷದ ಸಾಧನೆ’ ಎಂಬ ಟ್ಯಾಗ್‌ಲೈನ್‌ ಮೂಲಕ ಮೋದಿ ಅವರಿಗೆ ಪ್ರಶ್ನೆ ಕೇಳುತ್ತಿದ್ದಾರೆ.

‘ಗುಜರಾತಿನಲ್ಲಿ ಬಿಜೆಪಿಯ 22 ವರ್ಷದ ಆಡಳಿತವನ್ನು ಆಧರಿಸಿ ನಾನು 10 ಪ್ರಶ್ನೆಗಳನ್ನು ಕೇಳಿದ್ದೇನೆ. ಆದರೆ ಮೋದಿ ಅವರು ಒಂದೂ ಪ್ರಶ್ನೆಗೆ ಉತ್ತರಿಸಿಲ್ಲ. ಮೋದಿ ಅವರು ಮೊದಲ ಹಂತದ ಚುನಾವಣೆಯ ಪ್ರಣಾಳಿಕೆಯಲ್ಲೂ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿಲ್ಲ. ಇದೇನಾ ಮೋದಿ ಅವರ ಆಡಳಿತ?’ ಎಂದು ಟ್ವೀಟ್ ಮಾಡಿದ ರಾಹುಲ್ ಅವರು ಮೋದಿ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.

ಮತದಾರರ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವದ ಆತ್ಮವಿದ್ಧಂತೆ. ಮತದಾರರನ್ನು ಮೊದಲ ಬಾರಿಗೆ ಗುಜರಾತ್‌ಗೆ ಸ್ವಾಗತಿಸುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸು ಗಳಿಸುವಂತೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಗುಜರಾತಿನಲ್ಲಿ ಎರಡನೇ ಹಂತದ ಚುನಾವಣೆ ಡಿ.14ರಂದು ನಡೆಯಲಿದ್ದು, ಡಿ.18ರಂದು ಫಲಿತಾಂಶ ಹೊರಬೀಳಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.