ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಭೂಮಿಯ ಹನಿಗಳು

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಯಾರೂ ತುಳಿಯದ ದಾರಿಯಲಿ ಮೆರವಣಿಗೆ
ಹೊರಟವಳು ನೀನು
ಸಂಭ್ರಮದಲಿ ಸುರಿವ ಅಗ್ಗದ ಬಿಸಿಲಿಗೆ ಕರುಣೆಯಿರದು
ಯಾವತ್ತೂ
ಕಾದ ಕಬ್ಬಿಣವಾಗಿದೆ ನೆಲವು ಹೂ ಹಗುರ ಪಾದಗಳು
ಸುಟ್ಟಾವು ಜೋಕೆ.

ಹಗಲೂ ಇರುಳೂ ಕಳೆದು ಹೋಗುತಿವೆ ಕೂಡಿ
ಕಳೆವ ಲೆಕ್ಕದಲಿ ಬದುಕಿನ ಬಣ್ಣ ಮಾಸಿದೆ ಹೀಗೆ-
ಒಂದೊಮ್ಮೆ ಕಣ್ಣ ಮುಂದಿನ ಕದವ ತೆರೆದು ನೋಡಿದರೆ
ಎದೆಯ ಮೇಲೆಲ್ಲ ಆರದ ಗಾಯಗಳು ಆಕ್ರೋಶದಲ್ಲಿ
ನಂಬಿದ ದೇವರಿಗೆ ಕೀವು ನೆತ್ತರಿನ ನೈವೇದ್ಯ
ಹಿಡಿದಿವೆ.

ಎಷ್ಟೇ ಸವೆಸಿದರೂ ದಾರಿಯನ್ನು ತಿರುವುಗಳಲ್ಲಿ
ಮಾಯವಾಗಿವೆ ಹೆಜ್ಜೆಗಳು ಕಾಣಸಿಗದಂತೆ ಮಲ್ಲಿಗೆಯ
ಘಮವೂ ಕೂಡ ಸೋತಿರಲು ಶೋಧಿಸಲಾಗದೆ
ದೂರದ ಅರಮನೆಯ ಅಂಗಳದಲ್ಲಿ ಹೊಚ್ಚ ಹೊಸ
ಗೋರಿಯೊಂದು ಸಜ್ಜಾಗಿದೆ.

ಮತ್ತು,
ನಿನಗಾಗಿ
ನನ್ನ ಕಣ್ಣ ರೆಪ್ಪೆಯ ಮೇಲೆ ಮಡುಗಟ್ಟಿದ ಮಾತುಗಳು
ಮರುಭೂಮಿಯ ಬಿಸಿ ಹನಿಗಳಂತೆ
ತೊಟ್ಟಿಕ್ಕುತ್ತಿರಲು ಆರ್ದ್ರವಾಗಿ ಕೆನ್ನೆ ಮೇಲೆ
ಎಂದೂ ಆರದ ನೆತ್ತರಿನ ಕಲೆಗಳು ಮೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT