ಹುಲಿಗಣತಿ: ಪೂರ್ವಭಾವಿ ಕಾರ್ಯಾಗಾರ

ಗುಂಡ್ಲುಪೇಟೆ: ಫೆಬ್ರುವರಿಯಲ್ಲಿ ನಡೆಯಲಿರುವ ಹುಲಿಗಣತಿಗೆ ಪೂರ್ವಭಾವಿಯಾಗಿ ಬಂಡೀಪುರ ಉದ್ಯಾನದಲ್ಲಿ ಇತ್ತೀಚೆಗೆ ಕಾರ್ಯಾಗಾರ ನಡೆಯಿತು.
ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಹಾಗೂ ಮಹಾರಾ ಷ್ಟ್ರದ 100ಕ್ಕೂ ಹೆಚ್ಚು ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ನಿಖರವಾಗಿ ಗಣತಿ ನಡೆಸುವ ಬಗ್ಗೆ ತರಬೇತಿ ನೀಡಿದರು.
ಬಂಡೀಪುರದಲ್ಲಿ 2014ರಲ್ಲಿ ಹುಲಿ ಗಣತಿ ಕಾರ್ಯ ನಡೆದಿತ್ತು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಗಣತಿ ಕಾರ್ಯದಲ್ಲಿ ಆಧುನಿಕ ವಿಧಾನದ ಮೂಲಕ ಏಕಕಾಲದಲ್ಲಿ ಮುಖ್ಯ ಕೇಂದ್ರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿ ಕಾರದ ಐಜಿಎಫ್ ಸೋಮಶೇಖರ್, ಎಐಜಿಎಫ್ ರಾಜೇಂದ್ರ ಗಾರವಾಡ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್, ಎಪಿಸಿಎಫ್ ಜಯರಾಂ, ಎಫ್‌ಡಿಪಿಟಿ ಮನೋಜಕುಮಾರ್, ಬಂಡೀಪುರ ಸಿ.ಎಫ್ ಅಂಬಾಡಿ ಮಾಧವ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.