ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಸಣ್ಣ ಬ್ಯಾಗ್‌ಗಳಿಗೆ ಶುಲ್ಕ ಪಡೆಯದಂತೆ ಸೂಚನೆ

Last Updated 11 ಡಿಸೆಂಬರ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಪ್ರಯಾಣಿಕರ ಬ್ಯಾಗ್‌ಗಳಿಗೆ ಶುಲ್ಕ ವಿಧಿಸುವ ಕುರಿತ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ಸ್ಪಷ್ಟವಾದ ಆದೇಶ ಹೊರಡಿಸಿದ್ದಾರೆ.

60 ಸೆಂ.ಮೀ ಉದ್ದ x 45 ಸೆಂ.ಮೀ ಅಗಲ x 25 ಸೆಂ.ಮೀ ಎತ್ತರದವರೆಗಿನ ಬ್ಯಾಗ್‌ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅದಕ್ಕಿಂತ ಹೆಚ್ಚು ಗಾತ್ರದ ಬ್ಯಾಗ್‌ಗಳಿಗೆ ಪ್ರಯಾಣಿಕರಿಂದ ಪ್ರತಿ ಬ್ಯಾಗ್‌ಗೆ ₹ 30ರಂತೆ ಶುಲ್ಕ ವಸೂಲಿ ಮಾಡುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.

‘ಬ್ಯಾಗ್‌ಗಳಿಗೆ ಶುಲ್ಕ ವಿಧಿಸುವ ಬಗ್ಗೆ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಗೊಂದಲವಿತ್ತು. ಇದನ್ನು ನಿವಾರಿಸಿದ್ದೇವೆ. ಶುಲ್ಕ ವಿಧಿಸುವಾಗ ಯಾವುದನ್ನೆಲ್ಲ ಪರಿಗಣಿಸಬೇಕು ಹಾಗೂ ಯಾವುದನ್ನು ಪರಿಗಣಿಸಬಾರದು ಎಂಬುದನ್ನು ನಿರ್ದಿಷ್ಟಪಡಿಸಿದ್ದೇವೆ. ನಿತ್ಯ ಪ್ರಯಾಣಿಕರಿಗೆ ಇದರಿಂದ ಅನನುಕೂಲ ಆಗದಂತೆ ನೋಡಿಕೊಂಡಿದ್ದೇವೆ’ ಎಂದು ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಪ್ರಯಾಣಿಕರು ಭಾರಿ ಗಾತ್ರದ ಬ್ಯಾಗ್‌ಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ. ದೊಡ್ಡ ಬ್ಯಾಗ್‌ನೊಂದಿಗೆ ಮೆಟ್ರೊ ರೈಲಿನೊಳಗೆ ಪ್ರವೇಶಿಸುವಾಗ ಹಾಗೂ ರೈಲಿನಿಂದ ಹೊರಗೆ ಬರುವಾಗ ಸಹಪ್ರಯಾಣಿಕರಿಗೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಕೆಲವು ಪ್ರಯಾಣಿಕರು ದೂರಿದ್ದಾರೆ. ಶುಲ್ಕ ವಿಧಿಸಿದರೆ ಪ್ರಯಾಣಿಕರು ಅಗತ್ಯಕ್ಕಿಂತ ಹೆಚ್ಚು ಬ್ಯಾಗ್‌ ತರುವುದನ್ನು ನಿಯಂತ್ರಿಸಬಹುದು ಎಂಬ ಚಿಂತನೆ ನಮ್ಮದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT