ಪ್ರತ್ಯೇಕಗೊಂಡ ಬೋಗಿ ತಡವಾದ ಸಂಚಾರ

ಪಾಂಡವಪುರ (ಮಂಡ್ಯ): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಚಲಿಸುತ್ತಿದ್ದ ರೈಲಿನ ಬೋಗಿ ಪ್ರತ್ಯೇಕಗೊಂಡು ಆತಂಕ ಸೃಷ್ಟಿಸಿತು.
ಬೆಳಿಗ್ಗೆ 7.15ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್‌ನ ಹಿಂಬದಿಯ ಬೋಗಿ ಪ್ರತ್ಯೇಕಗೊಂಡಿತು. ಈ ನಿಲ್ದಾಣದಲ್ಲಿ ನಿಲುಗಡೆ ಇದ್ದ ಕಾರಣ ರೈಲು ನಿಧಾನವಾಗಿ ಬರುತ್ತಿದ್ದುದರಿಂದ ಯಾವುದೇ ಅನಾಹುತವಾಗಿಲ್ಲ.
ಪ್ರತ್ಯೇಕಗೊಂಡಿದ್ದ ಬೋಗಿಯನ್ನು ತ್ವರಿತವಾಗಿ ಜೋಡಿಸಿ ರೈಲು ಸಂಚಾರಕ್ಕೆ ರೈಲ್ವೆ ಅಧಿಕಾರಿಗಳು ಅನುವು ಮಾಡಿಕೊಟ್ಟರು. ಚಾಮುಂಡಿ ಎಕ್ಸ್‌ಪ್ರೆಸ್ 10 ನಿಮಿಷ ತಡವಾಗಿ ಚಲಿಸಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.