ಭಾನುವಾರ, ಮಾರ್ಚ್ 7, 2021
32 °C

ವಾಲಿಬಾಲ್: ಸಿಕ್ಯುಎಎಲ್‌ ತಂಡಕ್ಕೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಲಿಬಾಲ್: ಸಿಕ್ಯುಎಎಲ್‌ ತಂಡಕ್ಕೆ ಭರ್ಜರಿ ಜಯ

ಬೆಂಗಳೂರು: ರಾಜಶೇಖರ್ ಹಾಗೂ ಭರತ್ ಅವರ ಉತ್ತಮ ಆಟದ ನೆರವಿನಿಂದ ಸಿಕ್ಯುಎಎಲ್ ತಂಡ ಇಲ್ಲಿ ನಡೆಯುತ್ತಿರುವ 24ನೇ ರಾಜ್ಯ ಸೀನಿಯರ್‌ ‘ಎ’ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರದ ಪಂದ್ಯದಲ್ಲಿ ಜಯ ದಾಖಲಿಸಿದೆ.

ಸಿಕ್ಯುಎಎಲ್ ತಂಡ 25–22, 25–14, 23–25, 25–20ರಲ್ಲಿ ಬಿಎಸ್‌ಎಫ್‌ ತಂಡವನ್ನು ಮಣಿಸಿತು. 80 ನಿಮಿಷಗಳಲ್ಲಿ ಈ ತಂಡ ಎದುರಾಳಿಯನ್ನು 3–1ರಲ್ಲಿ ಕಟ್ಟಿಹಾಕಿತು.

ವಿಜಯೀ ತಂಡದ ಆಕ್ರಮಣಕಾರಿ ಆಟಗಾರ ರಾಜಶೇಖರ್‌, ಬ್ಲಾಕರ್‌ ಭರತ್‌, ಸುನಿಲ್‌ ಮತ್ತು ಪ್ರತೀಕ್ ಶೆಟ್ಟಿ ಉತ್ತಮ ಸಾಮರ್ಥ್ಯದೊಂದಿಗೆ ಹೋರಾಡಿದ್ದಾರೆ. ಬಿಎಸ್‌ಎಫ್‌ ತಂಡದಲ್ಲಿ ಆಲ್‌ರೌಂಡರ್ ಅರ್ಮಾನ್‌ದೀಪ್ ಸಿಂಗ್‌, ಶ್ರೀಜೇಶ್‌, ಬ್ಲಾಕರ್ ತೇಜಪಾಲ್ ಸಿಂಗ್‌ ಉತ್ತಮವಾಗಿ ಆಡಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಕೆಎಸ್‌ಪಿ ತಂಡ 3–1ರಲ್ಲಿ ಡಿವೈಇಎಸ್ ತಂಡವನ್ನು ಮಣಿಸಿತು. ಕೆಎಸ್‌ಪಿ 23–25, 25–15, 25–18, 25–17ರಲ್ಲಿ ಪೈಪೋಟಿ ನೀಡಿತು.

ವಿಜಯೀ ತಂಡದ ಆಲ್‌ರೌಂಡರ್ ಗಣೇಶ್‌, ಬ್ಲಾಕರ್ ಆದರ್ಶ್‌, ಆಕ್ರಮಣಕಾರಿ ಆಟಗಾರ ಅಭಿಷೇಕ್ ಮತ್ತು ಸುರೇಶ್ ಉತ್ತಮ ಸಾಮರ್ಥ್ಯ ತೋರಿದರು. ಡಿವೈಇಎಸ್ ತಂಡದಲ್ಲಿ ಜಬ್ಬಾರ್‌, ಬಸವ ಚೇತನ್‌, ಲಿಬೆರೊ ಭರತ್ ಪಾಯಿಂಟ್ಸ್ ಕಲೆಹಾಕುವಲ್ಲಿ ನೆರವಾದರು.

ಮಂಗಳವಾರ ರಾತ್ರಿ ನಡೆದ ಪಂದ್ಯಗಳಲ್ಲಿ ಕೆಎಸ್‌ಪಿ 25–17, 24–26, 25–17, 25–16, 17–15ರಲ್ಲಿ ಬಿಎಸ್‌ಎಫ್‌ ವಿರುದ್ಧವೂ, ಬಿಎಸ್‌ಎನ್‌ಎಲ್‌ 25–23, 25–16, 25–22ರಲ್ಲಿ ಪೋಸ್ಟಲ್ ತಂಡದ ಮೇಲೂ ಜಯಗಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.