ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬೆಳಗುವ ಸಸ್ಯ!

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಸ್ಟನ್, ಅಮೆರಿಕ: ಇನ್ನುಮುಂದೆ ಕಚೇರಿ, ಮನೆಯ ಬೆಳಕಿಗಾಗಿ ಬಲ್ಬ್ ಉರಿಸಬೇಕಿಲ್ಲ.ಇಲ್ಲಿಯ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ತಜ್ಞರು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಫಲವಾಗಿ ಸಸ್ಯಗಳೂ ಬೆಳಕು ಚೆಲ್ಲಬಲ್ಲವು. ಈ ಸಸ್ಯದ ಎಲೆಗೆ ವಿಶೇಷ ನ್ಯಾನೊ ಪಾರ್ಟಿಕಲ್‌ಗಳನ್ನು ವಿಜ್ಞಾನಿಗಳು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಸ್ಯಗಳು ಬೆಳಕನ್ನೂ ನೀಡುವ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಕಡಿಮೆ ತೀವ್ರತೆಯ ಒಳಾಂಗಣ ಬೆಳಕು ಸೃಷ್ಟಿಸಲು ಈ ತಂತ್ರಜ್ಞಾನ ಸಹಾಯಕವಾಗಲಿದೆ. ಬೀದಿದೀಪಗಳ ಬದಲಾಗಿ ಬೀದಿ ಬದಿಯ ಈ ಮರಗಳೇ ಬೆಳಕು ನೀಡುವ ಸಾಧನಗಳಾಗಿ ಬಳಕೆಯಾಗಲಿವೆ ಎಂದು ಸಂಶೋಧಕರು ಹೇಳಿದ್ದಾರೆ.

‘ಮೇಜಿನ ದೀಪವಾಗಿ (ಡೆಸ್ಕ್ ಲ್ಯಾಂಪ್) ಕೆಲಸ ಮಾಡುವ ಈ ಸಸ್ಯಕ್ಕೆ ಪ್ಲಗ್ ಹಾಕಬೇಕಿಲ್ಲ. ಸಸ್ಯಗಳಲ್ಲಿ ಸಹಜವಾಗಿ ನಡೆಯುವ ಚಯಾಪಚಯ ಕ್ರಿಯೆಯಿಂದಾಗಿ  (ಎನರ್ಜಿ ಮೆಟಬಾಲಿಸಂ) ಶಕ್ತಿ ಉತ್ಪಾದನೆಯಾಗುತ್ತದೆ’ ಎಂದು ಎಂಐಟಿ ಪ್ರಾಧ್ಯಾಪಕ ಮಿಖಾಯಿಲ್ ಸ್ಟ್ರಾನೊ ಹೇಳಿದ್ದಾರೆ.

ಆರಂಭದಲ್ಲಿ 45 ನಿಮಿಷ ಬೆಳಗುತ್ತಿದ್ದ ಈ ಸಸ್ಯಗಳ ಸಾಮರ್ಥ್ಯವು ಈಗ ಮೂರುವರೆ ಗಂಟೆಗೆ ಹೆಚ್ಚಳವಾಗಿದೆ. ಈ ಘಟಕಗಳನ್ನು ಸುರಕ್ಷಿತ ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ವರ್ಗೀಕರಿಸಿದೆ.

ಬೆಳಕು ಉತ್ಪಾದನೆ ಹೇಗೆ?

ಬೆಳಗುವ ಸಸ್ಯವನ್ನು ಸೃಷ್ಟಿಸುವ ಸಲುವಾಗಿ ‘ಲೂಸಿಫೆರೇಸ್’ ಎಂಬ ಒಂದು ವಿಧದ ಕಿಣ್ವವನ್ನು ಸಂಶೋಧಕರ ತಂಡವು ಬೆಳಕನ್ನು ಉತ್ಪಾದಿಸುವ ಸಾಧನವಾಗಿ ಪರಿವರ್ತಿಸಿದೆ. ಆಳಸಾಗರದ ಕೆಲ ಜಾತಿಯ ಮೀನುಗಳು (ಫೈರ್‌ಫ್ಲೈಸ್) ಹಾಗೂ ಮಿಂಚು ಹುಳುಗಳು ಬೆಳಕನ್ನು ಹೊರಸೂಸುತ್ತವೆ. ಇದೇ ರೀತಿ ಜೀವರಾಸಾಯನಿಕ ವಿಧಾನದಲ್ಲಿ ಈ ಕಿಣ್ವವು ಬೆಳಕನ್ನು (ಬಯೋಲೂಮಿನೆನ್ಸಸ್‌) ಹೊರಸೂಸುಸುತ್ತದೆ.

ಈ ಕಿಣ್ವವು ‘ಲೂಸಿಫೆರಿನ್’ ಎಂಬ ಸಣ್ಣ ಕಣವಾಗಿ ಕೆಲಸ ಮಾಡಿ, ಬೆಳಕು ಹೊರಹಾಕುತ್ತದೆ. ಮತ್ತೊಂದು ಕಿಣ್ವ ‘ಕೊಎನ್‌ಜೈಮ್ ಎ’ ವನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ. ಈ ಘಟಕಗಳನ್ನು ಒಟ್ಟುಗೂಡಿಸಿ, ವಿವಿಧ ನ್ಯಾನೊಪಾರ್ಟಿಕಲ್ ವಾಹಕಗಳಲ್ಲಿ ಹುದುಗಿಸಲಾಗಿದೆ. ಬಳಿಕ ಇವನ್ನು ಸಸ್ಯಗಳ ಎಲೆಗಳಿಗೆ ಅಳವಡಿಸಲಾಗುತ್ತದೆ. ಲೂಸಿಫೆರೇಸ್‌ಗಳನ್ನು ಸಾಗಿಸಲು 10 ನ್ಯಾನೊಮೀಟರ್‌ ವ್ಯಾಸದ ಸಿಲಿಕಾ ನ್ಯಾನೊಪಾರ್ಟಿಕಲ್‌ಗಳನ್ನು ಸಂಶೋಧಕರು ಬಳಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT