ರಘುರಾಮ್‌ರ ‘ಋತುಗಾನ’ ಕವನಸಂಕಲನ ಬಿಡುಗಡೆ

7

ರಘುರಾಮ್‌ರ ‘ಋತುಗಾನ’ ಕವನಸಂಕಲನ ಬಿಡುಗಡೆ

Published:
Updated:

ಚಿತ್ರದುರ್ಗ: ಬೆಂಗಳೂರಿನ ಕನ್ನಡ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ 2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ 37 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಬರಹಗಾರ ಜೋಡಿಚಿಕ್ಕೇನಹಳ್ಳಿ ಎಸ್.ರಘುರಾಮ್ ಅವರ ‘ಋತುಗಾನ’ ಕವನ ಸಂಕಲನ ಬಿಡುಗಡೆಯಾಯಿತು.

ಹಿರಿಯ ಸಾಹಿತಿ ಡಾ. ದೊಡ್ಡ ರಂಗೇಗೌಡ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಕಥೆಗಾರ ಡಾ.ಅಮರೇಶ್ ನುಗಡೋಣಿ ಅವರು ಕಥೆ ಹುಟ್ಟುವ ಹಾಗೂ ಕಥೆ ಕಟ್ಟುವಿಕೆಯ ಕುರಿತು ಮಾತನಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry