ಮರಿಯಮ್ಮನಹಳ್ಳಿ: ಅದು ಕಲಾಮಂದಿರದ ಒಳಾವರಣ. ಅಲ್ಲಿ ಮಕ್ಕಳದ್ದೇ ಪಾರುಪತ್ಯ. ಆಟ ಕುಣಿದಾಟ ನಲಿದಾಟದ ಜೊತೆಗೆ ಕೋಲಾಟ, ನೆಗೆದಾಟ ಸೇರಿದಂತೆ ರಂಗ ಗೀತೆಗಳ ಹಾಡು ಪಾಡು. ನಟನೆಯ ವರಸೆಗಳು. ನೃತ್ಯ, ಮಾತಿನ ಲಹರಿಗಳು...

ಪಟ್ಟಣದ ದುರ್ಗಾದಾಸ ಕಲಾ ಮಂದಿರದಲ್ಲಿ ಬೆಂಗಳೂರಿನ ನಾಟಕ ಅಕಾಡೆಮಿ ಹಾಗೂ ಸ್ಥಳೀಯ ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಒಂದು ತಿಂಗಳ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಡಿ ನಲಿವ ದೃಶ್ಯಗಳಿವು.

ನಾಟಕ, ಕಲೆಗಳ ತವರೂರು ಎನಿಸಿಕೊಂಡ ಪಟ್ಟಣ ರಂಗಭೂಮಿಗೆ ಹಲವು ಕಲಾವಿದೆಯರನ್ನು ನೀಡಿದೆ. ಇಲ್ಲಿನ ಕಲೆ, ಕಲಾವಿದರು ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿ ನಿರಂತರ ರಂಗ ತರಬೇತಿ ಶಾಲೆ ಹಾಗೂ ಕಲಾವಿದರನ್ನು ರಂಗ ಶಿಕ್ಷಕರನ್ನಾಗಿ ನೇಮಿಸಬೇಕೆನ್ನುವುದು ಕಲಾವಿದರ ಬೇಡಿಕೆ. ಅಂತಹದ್ದರಲ್ಲಿ ಅದಕ್ಕೆ ಪೂರಕವೆಂಬಂತೆ ಕಲಾಮಂದಿರದಲ್ಲಿ ಡಿ.11ರಿಂದ ಆರಂಭವಾದ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಉಜ್ಜಯನಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮಲ್ಲಿನ ಕಲಾ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ.

ನಾಟಕ ಅಕಾಡೆಮಿ ನೇಮಿಸಿದ ಸ್ಥಳೀಯ ಕಲಾವಿದ ಸರ್ದಾರ್ ಹಾಗೂ ರಾಮನಗರದ ಶಿವಕುಮಾರ್ ಶಿಬಿರದ ನಿರ್ದೇಶಕರಾಗಿ ಮಕ್ಕಳಿಗೆ ಅಭಿನಯದ ಜೊತೆಗೆ ಕೋಲಾಟ, ರಂಗ ಗೀತೆಗಳನ್ನು ಕಲಿಸುತ್ತಿದ್ದಾರೆ. ಮಕ್ಕಳು ಸಹ ಆಸಕ್ತಿಯಿಂದ ರಂಗ ವರೆಸೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಎರಡು ಮಕ್ಕಳ ನಾಟಕಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮಕ್ಕಳು ಅಭಿನಯದಲ್ಲಿ ತಲ್ಲೀನರಾಗಿದ್ದಾರೆ.

ಮಕ್ಕಳಿಗೆ ಆಟದ ಜೊತೆಗೆ ಪಾಠ ಎನ್ನುವಂತೆ, ಮಕ್ಕಳ ಮನೋವಿಕಾಸಕ್ಕೆ ರಂಗ ಶಿಕ್ಷಣ ಪೂರಕ ಎನ್ನುವ ಶಿಬಿರದ ನಿರ್ದೇಶಕ ಸರ್ದಾರ್, ‘ಶಿಬಿರದಿಂದ ಮಕ್ಕಳಿಗೆ ಬಹಳ ಅನುಕೂಲವಿದ್ದು, ಬೌದ್ಧಿಕ, ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಾಗಲು ಸಹಕಾರಿಯಾಗಿದ್ದು, ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕಿದೆ’ ಎನ್ನುತ್ತಾರೆ.

ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ, ‘ಈ ಶಿಬಿರದಿಂದ ಕೆಲ ಮಕ್ಕಳಾದರೂ ಉತ್ತಮ ಕಲಾವಿದರಾಗಿ ಹೊರಹೊಮ್ಮಬೇಕಿದೆ. ಜೊತೆಗೆ ಇಲ್ಲಿನ ರಂಗ ಪರಂಪರೆ ಮುಂದುವರೆಯಬೇಕಿದೆ’ ಎನ್ನುತ್ತಾರೆ.

ಜನವರಿ 16ರಂದು ಶಿಬಿರದ ಸಮಾರೋಪ ನಡೆಯಲಿದ್ದು, ಶಿಬಿರದ ಮಕ್ಕಳಿಂದ ನಾಗರಾಜ ಕೋಟೆ ಅವರ ‘ಮಾಯಾ ಕುರ್ಚಿ’ ಹಾಗೂ ಕುವೆಂಪು ಅವರು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.