ಆಕ್ಲಂಡ್‌ ಓಪನ್‌ ಟೆನಿಸ್‌: ಜೂಲಿಯಾಗೆ ಜಯ

7

ಆಕ್ಲಂಡ್‌ ಓಪನ್‌ ಟೆನಿಸ್‌: ಜೂಲಿಯಾಗೆ ಜಯ

Published:
Updated:

ಆಕ್ಲಂಡ್‌: ಜರ್ಮನಿಯ ಆಟಗಾರ್ತಿ ಜೂಲಿಯಾ ಜಾರ್ಜಸ್‌, ಆಕ್ಲಂಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಜೂಲಿಯಾ 6–4, 4–6, 6–2ರಲ್ಲಿ ಮೋನಿಕಾ ಪುಯಿಗ್‌ ವಿರುದ್ಧ ಗೆದ್ದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಜೂಲಿಯಾ ಮೊದಲ ಸೆಟ್‌ನಲ್ಲಿ ದಿಟ್ಟ ಹೋರಾಟ ನಡೆಸಿ ಗೆಲುವಿನ ಸಿಹಿ ಸವಿದರು. ಆದರೆ ಎರಡನೇ ಸೆಟ್‌ನಲ್ಲಿ ಮೋನಿಕಾ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಜೂಲಿಯಾ ಮೋಡಿ ಮಾಡಿದರು. ತಮ್ಮ ಸರ್ವ್‌ ಕಾಪಾಡಿಕೊಳ್ಳುವ ಜೊತೆ ಎದುರಾಳಿಯ ಎರಡು ಸರ್ವ್‌ಗಳನ್ನು ಮುರಿದು ಸಂಭ್ರಮಿಸಿದರು.

ಇತರ ಪಂದ್ಯಗಳಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ 7–6, 6–3ರಲ್ಲಿ ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೌಸೋವಾ ಎದುರೂ, ಚೀನಾ ತೈಪೆಯ ಸು ವೀ ಹ್ಸಿ 6–0, 6–3ರಲ್ಲಿ ಜಪಾನ್‌ನ ನಾವೊ ಹಿಬಿನೊ ವಿರುದ್ಧವೂ, ಬೆಲ್ಜಿಯಂನ ಕರ್ಸ್ಟನ್‌ ಫ್ಲಿಪ್‌ಕೆನ್ಸ್‌ 7–6, 3–6, 6–4ರಲ್ಲಿ ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ಎದುರೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry