ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯರೋಸ್‌ಗೆ ಬೆಂಗಾಲ್‌ ಸವಾಲು

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಆಟಗಾರರನ್ನು ಹೊಂದಿರುವ ಈಸ್ಟ್‌ ಬೆಂಗಾಲ್ ತಂಡ ಐಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ ಮಂಗಳವಾರ ಇಂಡಿಯನ್ ಆ್ಯರೋಸ್ ಎದುರು ಆಡಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈಸ್ಟ್‌ಬೆಂಗಾಲ್‌ ಜಯದಾಖಲಿಸುವ ನೆಚ್ಚಿನ ತಂಡ ಎನಿಸಿದೆ. ಆ್ಯರೋಸ್ ತಂಡದಲ್ಲಿ ಯುವ ಆಟಗಾರರು ಇದ್ದಾರೆ. ಆದ್ದರಿಂದ ಈ ತಂಡ ಯಾವುದೇ ಸಂದರ್ಭದಲ್ಲಿಯೂ ಪುಟಿದೇಳುವ ಗುಣ ಹೊಂದಿದೆ. ಆ್ಯರೋಸ್ ಆಡಿದ ಆರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಪಡೆದು ಏಳನೇ ಸ್ಥಾನದಲ್ಲಿದೆ.

ಹಿಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ 1–1ಗೋಲಿನಿಂದ ಮೋಹನ್ ಬಾಗನ್ ಎದುರು ಡ್ರಾ ಮಾಡಿಕೊಂಡಿತ್ತು.

‘ಆ್ಯರೋಸ್ ತಂಡದಲ್ಲಿ ಅನುಭವಿ ಆಟಗಾರರು ಇಲ್ಲ. ಆದರೆ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ತಂಡ ಪೂರ್ಣ ಸಿದ್ಧತೆಯೊಂದಿಗೆ ಆಡಲಿದೆ’ ಎಂದು ಈಸ್ಟ್‌ಬೆಂಗಾಲ್ ತಂಡದ ಕೋಚ್‌ ಖಾಲಿದ್ ಜಮೀಲ್ ಹೇಳಿದ್ದಾರೆ.

‘ಯುವ ತಂಡದೊಂದಿಗೆ ಆಡಲು ಆಟಗಾರರು ಉತ್ಸಾಹದಲ್ಲಿ ಇದ್ದಾರೆ. ಅವರಲ್ಲಿ ಕಲಿಯುವುದು ಸಾಕಷ್ಟಿದೆ. ಆ್ಯರೋಸ್ ತಂಡದಲ್ಲಿ ಇದ್ದ ಸ್ಟಾರ್ ಗೋಲ್‌ಕೀಪರ್ ಧೀರಜ್ ಸಿಂಗ್ ಐಲೀಗ್‌ನಿಂದ ಹಿಂದೆಸರಿದರು. ಅವರು ಪಂದ್ಯವನ್ನು ಬದಲಿಸುವ ಗುಣ ಹೊಂದಿದ್ದರು.

ಈಗ ನಮ್ಮ ತಂಡದ ಜಯದ ಹಾದಿ ಸುಗಮವಾಗಿದೆ ’ ಎಂದು ಜಮೀಲ್ ಹೇಳಿದ್ದಾರೆ.

ಬಾಗನ್‌–ಚೆನೈ ಪೈಪೋಟಿ: ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮೋಹನ್ ಬಾಗನ್ ಹಾಗೂ ಚೆನ್ನೈ ಸಿಟಿ ಎಫ್‌ಸಿ ತಂಡಗಳು ಆಡಲಿವೆ.

ಡಿಸೆಂಬರ್‌ 2 ರಂದು ನಡೆದ ಪಂದ್ಯದಲ್ಲಿ ಮೋಹನ್ ಬಾಗನ್‌ ತಂಡ ಚರ್ಚಿಲ್ ಬ್ರದರ್ಸ್ ಎದುರು 5–0 ಗೋಲುಗಳಿಂದ ಗೆದ್ದಿದೆ. ಆ ಬಳಿಕ ಈ ತಂಡ ಒಂದೂ ಪಂದ್ಯ ಗೆದ್ದಿಲ್ಲ. ಎರಡು ಪಂದ್ಯ ಡ್ರಾ ಮಾಡಿಕೊಂಡಿದೆ. ಇದರಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ಹಿಂದಿನ ಪಂದ್ಯದಲ್ಲಿ ಚೆನ್ನೈ ತಂಡ 1–2ಗೋಲುಗಳಲ್ಲಿ ಈಸ್ಟ್‌ ಬೆಂಗಾಲ್ ಎದುರು ಸೋತಿದೆ. ಕೋಲ್ಕತ್ತದಲ್ಲಿ ನಡೆಯುವ ಪೈಪೋಟಿಯಲ್ಲಿ ಬಾಗನ್ ಜಯದ ವಿಶ್ವಾಸ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT