ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಕ್ವೀನ್ ಲತೀಫಾಗೆ ಡೋಪಿಂಗ್ ನೀಡಿದ ಆರೋಪ; ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

Last Updated 2 ಜನವರಿ 2018, 9:42 IST
ಅಕ್ಷರ ಗಾತ್ರ

ಬೆಂಗಳೂರು: ಕುದುರೆ ಕ್ವೀನ್ ಲತೀಫಾಗೆ ಡೋಪಿಂಗ್ ನೀಡಿದ ಆರೋಪ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ಅಸಮ್ಮತಿಸಿದೆ.

ಪ್ರಕರಣ ರದ್ದು ಕೋರಿ ಬಿಟಿಸಿ ಸಿಇಒ ನಿರ್ಮಲ್ ಪ್ರಸಾದ್ ಅರ್ಜಿ ಸಲ್ಲಿಸಿದ್ದರು.

ತಡೆಯಾಜ್ಞೆ ನೀಡದಂತೆ ಪ್ರಾಸಿಕ್ಯೂಷನ್ ವಕೀಲ ರಾಚಯ್ಯ ಮನವಿದರು. ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಲಾಗಿದೆ.

2017ರ ಮಾರ್ಚ್‌ 5ರಂದು ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ನಡೆದಿತ್ತು. ರೇಸ್‌ನಲ್ಲಿ ಕ್ವೀನ್ ಲತೀಫಾ ಗೆಲುವು ಸಾಧಿಸಿತ್ತು.

ಆದರೆ, ಆನಂತರ ಕುದುರೆಯ ಮೂತ್ರದ ಮಾದರಿ ಪರೀಕ್ಷೆಯಲ್ಲಿ ಡೋಪಿಂಗ್ ಸಾಬೀತಾಗಿತ್ತು. ಈ ಕುರಿತು ಎಚ್.ಎಸ್.ಚಂದ್ರೇಗೌಡ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT