ಅಧಿಕಾರ ವಹಿಸಿಕೊಂಡ ಘೋಷ್‌

7

ಅಧಿಕಾರ ವಹಿಸಿಕೊಂಡ ಘೋಷ್‌

Published:
Updated:
ಅಧಿಕಾರ ವಹಿಸಿಕೊಂಡ ಘೋಷ್‌

ಮುಂಬೈ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ತೂಫಾನ್ ಘೋಷ್‌ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಹಿರಿಯ ಕ್ರಿಕೆಟ್ ಆಟಗಾರ ಸಾಬಾ ಕರೀಂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಚಟುವಟಿಕೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಇದೇ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡರು.

ಎಂ.ವಿ.ಶ್ರೀಧರ್‌ ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಬಿಸಿಸಿಐ ಕರೀಂ ಅವರನ್ನು ಮೇಮಿಸಿತ್ತು. ಬಿಸಿಸಿಐ ಬೆಳವಣಿಗೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರೊಂದಿಗೆ ಕರೀಂ ಕೈ ಜೋಡಿಸುವರು. ಕ್ರಿಕೆಟ್ ಅಕಾಡೆಮಿಯಲ್ಲಿ ಸಾಮರ್ಥ್ಯ ಅಭಿವೃದ್ಧಿ ಕೇಂದ್ರದ ಸ್ಥಾಪನೆಯಲ್ಲಿ ಘೋಷ್ ಅವರ ಮುಂದಿರುವ ದೊಡ್ಡ ಸವಾಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry