ಶನಿವಾರ, ಜೂಲೈ 11, 2020
28 °C

ಹಾಪ್‌ಮನ್‌ ಕಪ್‌ ಟೆನಿಸ್‌: ಅಮೆರಿಕಕ್ಕೆ ಗೆಲುವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪರ್ತ್‌, ಆಸ್ಟ್ರೇಲಿಯಾ: ಅಮೆರಿಕ ತಂಡವು ಹಾಪ್‌ಮನ್‌ ಕಪ್‌ ಟೆನಿಸ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ 2–1ರಲ್ಲಿ ಜಪಾನ್‌ ತಂಡವನ್ನು ಮಣಿಸಿತು.

ಗಾಯದ ಕಾರಣ ಜಪಾನ್‌ನ ನವೊಮಿ ಒಸಾಕ, ಮಹಿಳಾ ಸಿಂಗಲ್ಸ್‌ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಅಮೆರಿಕದ ಕೊಕೊ ವೆಂಡೆವೆಘ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಪುರುಷರ ಸಿಂಗಲ್ಸ್‌ನಲ್ಲಿ ಜಪಾನ್‌ನ ಯುಯಿಚಿ ಸುಗಿಟಾ 7–6, 1–1ರಲ್ಲಿ ಅಮೆರಿಕದ ಜಾಕ್‌ ಸಾಕ್‌ ವಿರುದ್ಧ ಗೆದ್ದರು.

ಮೊದಲ ಸೆಟ್‌ನಲ್ಲಿ ನಿರಾಸೆಗೊಂಡ ಜಾಕ್‌, ಎರಡನೇ ಸೆಟ್‌ನಲ್ಲಿ 1–1ರಿಂದ ಸಮಬಲ ಸಾಧಿಸಿದ್ದರು. ಈ ವೇಳೆ ಗಾಯಗೊಂಡ ಅವರು ಪಂದ್ಯದಿಂದ ಹಿಂದೆ ಸರಿದರು.

ಮಿಶ್ರ ಡಬಲ್ಸ್‌ನಲ್ಲಿ ಜಪಾನ್‌ನ ಒಸಾಕ ಮತ್ತು ಸುಗಿಟಾ ಆಡಲಿಲ್ಲ. ಹೀಗಾಗಿ ಅಮೆರಿಕದ ವೆಂಡೆವೆಘ್ ಮತ್ತು ಜಾಕ್‌ಗೆ ‘ವಾಕ್‌ ಓವರ್‌’ ಲಭಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.