ಲಖನೌ: ಪತಿಯ ಚಿಕಿತ್ಸೆಯ ವೆಚ್ಚ ಭರಿಸಲು ಹಣ ಇಲ್ಲದೆ ಮಹಿಳೆ ₹42 ಸಾವಿರಕ್ಕೆ ತನ್ನ ನವಜಾತ ಶಿಶುವನ್ನು ಮಾರಿದ್ದ ಪ್ರಕರಣದಲ್ಲಿ ವಿವಿಧೆಡೆಯಿಂದ ಸಹಾಯಹಸ್ತ ಬಂದ ನಂತರ, ಶಿಶು ಮತ್ತೆ ತಾಯಿಯ ಮಡಿಲು ಸೇರಿದೆ.

ಬರೇಲಿ ಜಿಲ್ಲೆಯ ಢಕಿಯಾ ಖೋಹ ಗ್ರಾಮದಲ್ಲಿ ವರದಿಯಾದ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ಸಂಜು ದೇವಿಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.

ಸಂಜು ದೇವಿ ತನ್ನ ಪತಿ ಹರ್‌ಸ್ವರೂಪ್ ಮೌರ್ಯ ಚಿಕಿತ್ಸೆಯ ವೆಚ್ಚ ಭರಿಸಲು ಸಾಲ ಮಾಡಿದ್ದರು. ಸಾಲ ಪಾವತಿಸಲು ಸಾಧ್ಯವಾಗದೆ 15 ದಿನದ ನವಜಾತ ಶಿಶುವನ್ನು ಪಕ್ಕದ ಗ್ರಾಮದ ದಂಪತಿಗೆ ಮಾರಾಟ ಮಾಡಿದ್ದರು.

ಕುಟುಂಬಕ್ಕೆ ಅಗತ್ಯ ನೆರವು ನೀಡದೆ ಇದ್ದ ಕುರಿತು ವಿವರಣೆ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.