ನಿತೀಶ್‌ ಕುಮಾರ್‌ ಗಿಂತ ಪುತ್ರ ಹೆಚ್ಚು ಶ್ರೀಮಂತ

7

ನಿತೀಶ್‌ ಕುಮಾರ್‌ ಗಿಂತ ಪುತ್ರ ಹೆಚ್ಚು ಶ್ರೀಮಂತ

Published:
Updated:
ನಿತೀಶ್‌ ಕುಮಾರ್‌ ಗಿಂತ ಪುತ್ರ ಹೆಚ್ಚು ಶ್ರೀಮಂತ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗಿಂತ ಪುತ್ರನೇ ಹೆಚ್ಚು ಶ್ರೀಮಂತ. ನಿತೀಶ್‌ ಕುಮಾರ್‌ ಅವರು ₹56.23 ಲಕ್ಷ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದಾರೆ. ಆದರೆ, ಅವರ ಪುತ್ರ ನಿಶಾಂತ್‌ ಇದಕ್ಕಿಂತ ನಾಲ್ಕು ಪಟ್ಟು ಅಂದರೆ, ಒಟ್ಟು ₹2.43 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರ ಆಸ್ತಿ ವಿವರಗಳನ್ನು ಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ನಿತೀಶ್‌ ಕುಮಾರ್‌ ಬಳಿ 9 ಆಕಳುಗಳು ಮತ್ತು ಏಳು ಕರುಗಳಿವೆ. ಎರಡು ಕಾರುಗಳನ್ನು ಹೊಂದಿದ್ದಾರೆ.

ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ₹94.92 ಲಕ್ಷ ಚರಾಸ್ತಿ ಹೊಂದಿದ್ದಾರೆ. ಮೋದಿ ಅವರ ಪತ್ನಿ  ₹1.35 ಕೋಟಿ ಚರಾಸ್ತಿ ಹೊಂದಿದ್ದಾರೆ. ಇದರಲ್ಲಿ ₹12.60 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry