ನಾಳೆಯಿಂದ ಪುಲಿಗೆರೆ ಉತ್ಸವ

7

ನಾಳೆಯಿಂದ ಪುಲಿಗೆರೆ ಉತ್ಸವ

Published:
Updated:

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಜ.5ರಿಂದ 7ರವರೆಗೆ ಇನ್ಫೊಸಿಸ್‌ ಫೌಂಡೇಷನ್‌ ಆಶ್ರಯದಲ್ಲಿ 3ನೇ ವರ್ಷದ ಪುಲಿಗೆರೆ ಉತ್ಸವ ನಡೆಯಲಿದೆ ಎಂದು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ ನೆಲವಗಿ ತಿಳಿಸಿದ್ದಾರೆ.

ಸಂಗೀತ, ನೃತ್ಯ, ಚಿತ್ರೋತ್ಸವದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಬಸವರಾಜ ಭಜಂತ್ರಿ (ಶಹನಾಯಿ), ಪಂ.ಬಾಲಚಂದ್ರ ನಾಕೋಡ (ತಬಲಾ), ದತ್ತಾತ್ರೇಯ ವೇಣಂತರ, ಬಾಲಸುಬ್ರಹ್ಮಣ್ಯ ಶರ್ಮಾ (ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಜುಗಲ್‌ಬಂದಿ), ಉಸ್ತಾದ್ ಫಯಾಜ್‌ಖಾನ್, ಶ್ರೀಪಾದ ಹೆಗಡೆ (ಹಿಂದೂಸ್ತಾನಿ ಸಂಗೀತ) ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry