ಐಸಿಸಿ ಅಂಪೈರ್‌ ಸಮಿತಿಯಲ್ಲಿ ಭಾರತದ ನಂದನ್‌, ಅನಿಲ್‌

7

ಐಸಿಸಿ ಅಂಪೈರ್‌ ಸಮಿತಿಯಲ್ಲಿ ಭಾರತದ ನಂದನ್‌, ಅನಿಲ್‌

Published:
Updated:
ಐಸಿಸಿ ಅಂಪೈರ್‌ ಸಮಿತಿಯಲ್ಲಿ ಭಾರತದ ನಂದನ್‌, ಅನಿಲ್‌

ದುಬೈ: ಭಾರತದ ಸಿ.ಕೆ.ನಂದನ್‌ ಮತ್ತು ಅನಿಲ್‌ ಚೌಧರಿ ಅವರು ಜನವರಿ 13ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬುಧವಾರ 14 ಮಂದಿ ಅಂಪೈರ್‌ಗಳ ಸಮಿತಿಯನ್ನು ಪ್ರಕಟಿಸಿದೆ.

ಇದರಲ್ಲಿ ನಂದನ್‌, ಅನಿಲ್‌, ರಾಬರ್ಟ್‌ ಬೇಲಿ, ಗ್ರೆಗೊರಿ ಬ್ರಾಥ್‌ವೇಟ್‌, ನಿಗೆಲ್‌ ಡುಗುಯಿಡ್‌, ಶಾನ್‌ ಜಾರ್ಜ್‌, ಶಾನ್‌ ಹೈಗ್‌, ಮಾರ್ಕ್‌ ಹೌಥೊರ್ನ್‌, ರ‍್ಯಾನ್‌ಮೋರ್‌ ಮಾರ್ಟಿನೆಜ್‌, ಅಶಾನ್‌ ರಾಜಾ,ಶೋಜಾಬ್‌ ರಾಜಾ, ತಿಮೊಥಿ ರಾಬರ್ಟ್‌ ರಾಬಿನ್‌ಸನ್‌, ಲಾಂಗ್‌ಟನ್‌ ರುಸೆರೆ ಮತ್ತು ಪಾಲ್‌ ವಿಲ್ಸನ್‌ ಅವರೂ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry