ಬುಧವಾರ, ಆಗಸ್ಟ್ 5, 2020
21 °C

‘ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ’

ಪಿಟಿಐ Updated:

ಅಕ್ಷರ ಗಾತ್ರ : | |

‘ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ’

ವಾಷಿಂಗ್ಟನ್: ದೀರ್ಘಕಾಲದಿಂದ ಬಾಕಿಯಿರುವ ಇಸ್ರೇಲ್ ಜೊತೆಗಿನ ಶಾಂತಿ ಒಪ್ಪಂದ ಮಾತುಕತೆಗೆ ಮುಂದಾಗದಿದ್ದರೆ ಪ್ಯಾಲೆಸ್ಟೀನ್‌ಗೆ ನೀಡುತ್ತಿರುವ ₹1,900 ಕೋಟಿ (300 ಮಿಲಿಯನ್ ಡಾಲರ್) ಅನುದಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇನ್ನೊಂದೆಡೆ, ಈ ಬ್ಲ್ಯಾಕ್‌ಮೇಲ್‌ ತಂತ್ರಕ್ಕೆ ನಾವು ಹೆದರುವುದಿಲ್ಲ ಎಂದು ಪ್ಯಾಲೆಸ್ಟೀನ್ ನಾಯಕರು ಹೇಳಿದ್ದಾರೆ.

ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಅನ್ನು ಘೋಷಿಸಿದ ಬಳಿಕ ಟ್ರಂಪ್ ಹಾಗೂ ಪ್ಯಾಲೆಸ್ಟೀನ್ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.