ಸೋಮವಾರ, ಜೂಲೈ 6, 2020
28 °C
ಬಿಜೆಪಿ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಅಬ್ದುಲ್‌ ಅಜಿಂ ಅಭಿಮತ

‘ತ್ರಿವಳಿ ತಲಾಖ್‌ ನಿಷೇಧ: ಅಲ್ಪಸಂಖ್ಯಾತರು ಬಿಜೆಪಿಯೆಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ‘ತ್ರಿವಳಿ ತಲಾಖ್‌’ ನಿಷೇಧದ ಬಳಿಕ ಅಲ್ಪಸಂಖ್ಯಾತರು ಬಿಜೆಪಿಯೆಡೆಗೆ ಆಕರ್ಷಿತರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಅಜಿಂ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬುಧವಾರ ನಡೆದ ನಗರ ಹಾಗೂ ಚಾಮನಹಳ್ಳಿ ಜಿಲ್ಲಾ ಪಂಚಾಯಿತಿ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ದೇಶದಾದ್ಯಂತ ಎದ್ದಿದೆ. ಇವರ ಜನಪರ ಕಾಳಜಿ, ಜನಪ್ರಿಯತೆ ಮೆಚ್ಚಿ ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಕಮಲ ಅರಳಿಸುವ ಯತ್ನದಲ್ಲಿದ್ದೇವೆ. ಇದು ಸಾಧ್ಯವಾಗಬೇಕಿದ್ದರೆ, ತಳಹಂತದಿಂದ ಪಕ್ಷ ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಘಟಕ ಅಧ್ಯಕ್ಷ ಎನ್.ಲಕ್ಷ್ಮಣಕುಮಾರ್‌ ಅಧ್ಯಕ್ಷತೆ ವಹಿಸಿ, ‘ಇಡೀ ದೇಶದಲ್ಲಿ ಬಿಜೆಪಿ ಅಲೆ ವ್ಯಾಪಕವಾಗಿ ಎದ್ದಿದೆ. ಈ ಅಲೆ ಕರ್ನಾಟಕವನ್ನೂ ಆವರಿಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜ. 7ರಂದು ಪಟ್ಟಣದ ಮದ್ದೂರಮ್ಮ ಕಲ್ಯಾಣ ಮಂಟಪದಲ್ಲಿ ನವಶಕ್ತಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಲ್ಲಿಕಾರ್ಜುನ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜು, ಚಾಮನಹಳ್ಳಿ ಜಿ.ಪಂ ಘಟಕದ ಅಧ್ಯಕ್ಷ ಸಿ.ಟಿ.ಮಹೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಮಹೇಂದ್ರ, ಎಂ.ಸಿ.ಸಿದ್ದು, ಮುಖಂಡರಾದ ಕೆ.ಎನ್‌.ವನಜಾಕ್ಷಿ, ರಾಮರಾಜು, ಕೆ.ಎಂ.ರಮೇಶ್, ಗಿರೀಶ್, ಜಗನ್ನಾಥ್‌, ಪಿ.ಮಲ್ಲೇಶ್, ಶ್ರೀನಿವಾಸ ಶೆಟ್ಟಿ, ದಾಕ್ಷಾಯಿಣಿ, ಕುಪ್ಪಸ್ವಾಮ, ಜಿ.ಅರವಿಂದ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.