ಮಡಿಕೇರಿ: ಸ್ಥಗಿತಗೊಂಡಿರುವ ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ಕುಲಶಾಸ್ತ್ರ ಅಧ್ಯಯನ ನಡೆಸಲು ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಗೆ ಈ ಹಿಂದೆ ವಹಿಸಿತ್ತು. ಜತೆಗೆ, ಅಧ್ಯಯನಕ್ಕೆ ₹ 11 ಲಕ್ಷ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲವರು ಕುತಂತ್ರ ನಡೆಸಿದ ಪರಿಣಾಮ ಅಧ್ಯಯನ ಸ್ಥಗಿತ ಮಾಡಲಾಗಿತ್ತು. ಮರು ಚಾಲನೆ ನೀಡುವ ಮೂಲಕ ಸಾಧನಾ ಸಂಭ್ರಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು 1 ತಿಂಗಳು ಅಧ್ಯಯನ ನಡೆಸಿದ್ದರು. 2016 ಡಿಸೆಂಬರ್‌ನಲ್ಲಿ ಸ್ಥಗಿತ ಗೊಂಡಿರುವ ಅಧ್ಯಯನಕ್ಕೆ ಚಾಲನೆ ನೀಡಲು ಮರು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಂಬಂಡ ಜನತ್, ಪುಲ್ಲೆರ ಕಾಳಪ್ಪ, ಮಂದಪಂಡ ಮನೋಜ್ ಮತ್ತು ಕೂಪದಿರ ಸಾಬು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.