ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರ್ಲಹಳ್ಳಿ: ಕ್ಯಾತೆದೇವರ ಬಾರೆಕಳ್ಳೆ ದೇಗುಲ ಉತ್ಸವ

ಜಾನಪದ ಸಿರಿವಂತಿಕೆ ಮೆರೆದೆ ಕಾಡು ಗೊಲ್ಲರ ಸಂಪ್ರಾದಯ
Last Updated 4 ಜನವರಿ 2018, 13:25 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕು ಪರಶುರಾಂಪುರ ಹೋಬಳಿಯ ಪುರ್ಲಹಳ್ಳಿಯ ವಸಲು ದಿನ್ನೆಯಲ್ಲಿ ಬುಧವಾರ ಬೆಳಿಗಿನ ಜಾವ ಕ್ಯಾತೆದೇವರಿಗೆ ಬಾರೆಕಳ್ಳೆಯ ಗುಡಿ ನಿರ್ಮಾಣ ಮಾಡುವ ಮೂಲಕ ಕಳಸ ಜ್ಯೋತಿ ಸ್ಥಾಪಿಸಲಾಯಿತು.

ವಸಲು ದಿನ್ನೆಯಲ್ಲಿ ಬಾರೆ ಕಳ್ಳೆಯಿಂದ ಗುಡಿ ನಿರ್ಮಿಸುವುದು ಜಾತ್ರೆಯ ಒಂದು ವಿಶೇಷ. ಕ್ಯಾತಗೊಂಡನಹಳ್ಳಿಯಿಂದ ದೇವರ ಪೂಜೆ ಮರ ಕಡಿದು ತಂದ ಜನರು, ಅದನ್ನು ಮಧ್ಯದಲ್ಲಿ ಇಟ್ಟು ಸುತ್ತಲು ಅಡ್ಡ ಸಾಪುಗಳನ್ನ ಹಾಕುತ್ತಾರೆ.

ಗುಡಿ ಕಟ್ಟಿಗೆ ಸೇರಿದ ಬೊಮ್ಮನಗೌಡರು ಹಾಗೂ ಕೋಣನ ಗೌಡರು ಒಂದೇ ದೇವಸ್ಥಾನದ ಅರ್ಧರ್ಧ ಭಾಗವನ್ನು ಬಾರೆ ಕಳ್ಳೆ, ತುಗ್ಗಲಿ ಮೋರು, ಮುಂತಾದ ವಸ್ತುಗಳನ್ನು ಬಳಸಿ 15ರಿಂದ 20 ನಿಮಿಷಗಳಲ್ಲಿ ನಿರ್ಮಾಣ ಮಾಡುವುದು ನೆರೆದವರಲ್ಲಿ ರೋಮಾಂಚನವನ್ನು ಉಂಟುಮಾಡಿತು.

ಗುಡುಕಟ್ಟಿದ ನಂತರ ಬೊಮ್ಮನ ಗೌಡರ ಮತ್ತು ಕೋಣನ ಗೌಡರ ಒಬ್ಬೊಬ್ಬ ಈರಗಾರರು ಕಳ್ಳೆಗುಡಿಯ ಮೇಲೆ ತಾಮುಂದು – ನಾಮುಂದು ಎಂದು ಕಳಸ ಪ್ರತಿಷ್ಠಾಪಿಸುವ ದೃಶ್ಯ ನೋಡುಗರ ಮನಸೂರೆಗೊಂಡಿತು. ಈ ಬಾರಿ ಕಸ್ತೂರಿ ತಿಮ್ಮಣಹಳ್ಳಿಯ ರಾಜಣ್ಣ ಮತ್ತು ಕ್ಯಾತಗೊಂಡನಹಳ್ಳಿಯ ರಾಜು ಎಂಬುವವರು ಬಾರೆ ಕಳ್ಳೆಯ ಮೇಲೆ ಕಳಸವನ್ನು ಸ್ಥಾಪಿಸಿ ಬಂದರು.

ಗುರುವಾರ ಬಂಜಿಗೆರೆಯಿಂದ ವೀರಣ್ಣ ದೇವರು, ಬತವಿನ ದೇವರು, ಐಗ್ಲಾರಹಳ್ಳಿಯ ತಾಳಿದೇವರು, ಜೊತೆಗೆ ಚನ್ನಮ್ಮನಾಗತಿಹಳ್ಳಿಯ ಕ್ಯಾತೆದೇವರ ಉತ್ಸವ ಮೂರ್ತಿಗಳನ್ನು ಪುರ್ಲಹಳ್ಳಿ ವಸಲು ದಿನ್ನೆಯಲ್ಲಿ ಕಟ್ಟಿರುವ ಗುಡಿಗೆ ತಂದು ಜಾತ್ರೆ ಮುಗಿಯುವರೆಗೆ ಸ್ಥಾಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT