ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ವರ್ಷದ ಮೊದಲ ಚೇತರಿಕೆ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಗುರುವಾರದ ವಹಿವಾಟಿನಲ್ಲಿ ಮೂರು ದಿನಗಳ ಕುಸಿತಕ್ಕೆ ಕೊನೆ ಹಾಡಿ ಹೊಸ ವರ್ಷದಲ್ಲಿ ಮೊದಲ ಬಾರಿಗೆ ಏರಿಕೆ ದಾಖಲಿಸಿತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನರ್ಧನ ಉದ್ದೇಶಕ್ಕೆ ₹ 80 ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚಕ್ಕೆ ಸಂಸತ್ತಿನ ಒಪ್ಪಿಗೆ ಕೇಳಿರುವುದು ಬ್ಯಾಂಕಿಂಗ್‌ ಷೇರುಗಳು ಲಾಭ ಮಾಡಿಕೊಳ್ಳಲು ನೆರವಾಯಿತು.

ಎಸ್‌ಬಿಐ ಷೇರು ಬೆಲೆ ಶೇ 1.72ರಷ್ಟು ಏರಿಕೆ ಕಂಡಿತು. ಯೂಕೊ ಬ್ಯಾಂಕ್, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಬರೋಡಾ, ಐಡಿಬಿಐ ಮತ್ತಿತರ ಬ್ಯಾಂಕ್‌ಗಳ ಷೇರುಗಳ ಬೆಲೆ ಗರಿಷ್ಠ ಶೇ 8.5ರವರೆಗೆ ಏರಿಕೆ ದಾಖಲಿಸಿದವು.

ದೇಶಿ ಸೇವಾ ವಲಯವು ಅಲ್ಪಪ್ರಮಾಣದ ಬೆಳವಣಿಗೆ ಹಾದಿಗೆ ಮರಳಿರುವುದು ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಕೂಡ ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದೆ.

33,802 ರಿಂದ 33,995 ಅಂಶಗಳ ಮಧ್ಯೆ ಚಲಿಸಿದ ಸೂಚ್ಯಂಕವು ಅಂತಿಮವಾಗಿ 176 ಅಂಶಗಳ ಏರಿಕೆಯೊಂದಿಗೆ (33,969) ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ  62 ಅಂಶಗಳ ಹೆಚ್ಚಳ ಕಂಡು 10,504 ಅಂಶಗಳಿಗೆ ತಲುಪಿತು.

‘ಲೋಹದ ಷೇರುಗಳಲ್ಲಿನ ಖರೀದಿ ಆಸಕ್ತಿ ಮತ್ತು ಬ್ಯಾಂಕ್‌ಗಳ ಪುನರ್ಧನ ಯೋಜನೆ ಅಂತಿಮಗೊಂಡಿರುವುದರಿಂದ ಪೇಟೆಯಲ್ಲಿ ಖರೀದಿ ಉತ್ಸಾಹ ಮರುಕಳಿಸಿದೆ’ ಎಂದು  ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರತಿಕ್ರಿಯಿಸಿದ್ದಾರೆ. ಟಾಟಾ ಸ್ಟೀಲ್‌ (ಶೇ 3.74ರಷ್ಟು) ಗರಿಷ್ಠ  ಏರಿಕೆ ದಾಖಲಿಸಿದರೆ, ನಂತರದ ಸ್ಥಾನದಲ್ಲಿ ಡಾ. ರೆಡ್ಡಿಸ್‌ (ಶೇ 3.14) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT