ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷ ಹೊಸ ಉತ್ಕರ್ಷ

Last Updated 4 ಜನವರಿ 2018, 19:37 IST
ಅಕ್ಷರ ಗಾತ್ರ

ಕಾಲಕ್ಕೆ ಆದಿಯಿಲ್ಲ ಅಂತ್ಯವಿಲ್ಲ, ಅದು ನಿರಂತರ. ಆದರೂನಿಮಿಷ, ಗಂಟೆ, ದಿನ, ವಾರ, ಮಾಸ, ವರ್ಷ ಎಂದು ವ್ಯವಹಾರಕ್ಕಾಗಿ ಕಾಲವನ್ನು ಗುರುತಿಸುತ್ತೇವೆ. ಹಲವರಿಗೆ ಜನವರಿ ವರ್ಷದ ಆರಂಭವಾದರೆ, ಇನ್ನು ಕೆಲವರಿಗೆ ಯುಗಾದಿ ಹೊಸ ವರ್ಷವಾಗಿದೆ. ವೀರ ನಿರ್ವಾಣ ಸಂವತ್ಸರವು ಪ್ರಾರಂಭವಾಗುವ ದೀಪಾವಳಿಯು ಜೈನರಿಗೆ ಹೊಸ ವರ್ಷವಾಗಿದೆ. ಹೀಗೆ ಇನ್ನು ಅನೇಕರಿಗೆ ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ದಿನಗಳು ನವ ವರ್ಷದ ಆರಂಭದ ದಿನಗಳಾಗಿವೆ. ಎಲ್ಲ ಹೊಸ ವರ್ಷಗಳು ಎಲ್ಲರಿಗೂ ಹರ್ಷವನ್ನು ತರುವುದು.

ಹೊಸದು ಎನಿಸುವುದೆಲ್ಲ ಸ್ವಲ್ಪ ಸಮಯದಲ್ಲೆ ಹಳೆಯದು ಆಗುವುದು. ಹಾಗಾಗದಿದ್ದರೆ ಮತ್ತೆ ಹೊಸದು ಬರುವುದಾದರು ಹೇಗೆ? ಸ್ಥಿತ್ಯಂತರ ಕಾಲದಲ್ಲಿ ಭೋಗವಾದಿಗಳೆಲ್ಲ ಹೋಟಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಸೇರಿ ಮೋಜು ಮಸ್ತಿಯಲ್ಲಿರುತ್ತಾರೆ. ಜಗತ್ತಿನಲ್ಲಿ ಈ ರೀತಿಯ ಆಕರ್ಷಣೆ ಎಷ್ಟು ಇದೆಯೋ, ಅದೆಲ್ಲ ಬೆಲೂನಿನ ರೀತಿಯದು. ಬೆಲೂನಿನಲ್ಲಿ ಗಾಳಿ ಇರುವವರೆಗೂ ಆಕರ್ಷಕ. ಅದು ಎಷ್ಟು ದಿನವಿರುತ್ತೆ? ಒಂದೆರಡು ದಿನ ಮಾತ್ರ.

ಆದ್ದರಿಂದ ಹರ್ಷ ತರುವ ಹೊಸ ವರ್ಷ ಯಾವಾಗ ಸಾರ್ಥಕವಾಗುವುದೆಂದು ನಾವು ಚಿಂತಿಸಬೇಕಾಗಿದೆ. ನವ ವರ್ಷಾಚರಣೆ ಸಂದರ್ಭದಲ್ಲಿ ನವ ಉತ್ಕರ್ಷ ಉಂಟಾದರೆ ಆಗ ಸಾರ್ಥಕ. ಇದಕ್ಕೆ ನಮ್ಮ ಭಾವನೆಗಳು, ಆಲೋಚನೆಗಳು ಬದಲಾಗಬೇಕು. ಆಗ ಬದುಕಿನಲ್ಲಿ ಹೊಸದು ಶುರು. ಒಂದು ನಿಮಿಷ ಕಣ್ಣು ಮುಚ್ಚಿ ಆತ್ಮಾವಲೋಕನ ಮಾಡಿಕೊಳ್ಳಿ. ಲಾಭನಷ್ಟ ಗುರುತಿಸಿ. ದೌರ್ಬಲ್ಯಗಳ ಪಟ್ಟಿ ಮಾಡಿ. ಗುರಿಯ ಕಡೆ ಗಮನ ಹರಿಸಿ. ಬರಿ ಹಗಲುಗನಸು ಕಾಣುವುದಕ್ಕೆ ಅಂಕುಶ ಹಾಕಿ. ಆಂತರ್ಯದಲ್ಲಿ ಅಧ್ಯಾತ್ಮದ ಪ್ರತಿಷ್ಠಾಪನೆ ಆಗಲಿ. ಆಗ ಜೀವನವೇ ಉತ್ಸಾಹ. ಅದಕ್ಕೆ ಸತತ ಪ್ರಯತ್ನ ಆಗಲೇ ಬೇಕು.

ಇರುವ ದೌರ್ಬಲ್ಯಗಳನ್ನು ಸಮಾಪ್ತಗೊಳಿಸುವ ದೃಢ ಸಂಕಲ್ಪಮಾಡಬೇಕು. ಆಚಾರ್ಯ ಕುಂಕುಂದರ ಪ್ರಕಾರ ನಮ್ಮ ರಾಗ ಭೋಗಗಳ ಅನುಭವವೆಲ್ಲ ಚರ್ವಿತ ಚರ್ವಣ. ಆದುದರಿಂದಇದುವರೆಗೆ ಪರಿಚಿತವಲ್ಲದುದನ್ನು ಪರಿಚಯಿಸಿಕೊಳ್ಳಬೇಕು. ಇದಕ್ಕೆ ಪ್ರತಿಬದ್ಧರಾಗಬೇಕು. ನಾವು ಉನ್ನತರೂ ತುಚ್ಛರೂ ಸಂಕಲ್ಪದಿಂದಲೇ ಆಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT