ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಪರ್ಮಿಟ್‌ ವ್ಯವಸ್ಥೆ ಪ್ರಾಯೋಗಿಕ ಜಾರಿ

Last Updated 4 ಜನವರಿ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಟೊಗಳ ನಕಲಿ ಪರವಾನಗಿ ಪತ್ತೆ ಹಚ್ಚುವುದಕ್ಕಾಗಿ ಸಾರಿಗೆ ಇಲಾಖೆ ಪರಿಚಯಿಸಿರುವ ‘ಇ– ಪರ್ಮಿಟ್‌’ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಶಾಂತಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ಈ ವ್ಯವಸ್ಥೆಯ ಪರೀಕ್ಷೆ ಆರಂಭವಾಗಿದೆ. ನ್ಯಾಷನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ) ಸಿಬ್ಬಂದಿ ಈ ವ್ಯವಸ್ಥೆಯ ನಿರ್ವಹಣೆ ಮಾಡುತ್ತಿದ್ದಾರೆ.

ಚಾಲಕರ ಆಧಾರ್‌ ಸಂಖ್ಯೆ ಪಡೆಯುತ್ತಿರುವ ಸಿಬ್ಬಂದಿ, ಅದನ್ನು ಇ–ಪರ್ಮಿಟ್‌ನಲ್ಲಿ ದಾಖಲು ಮಾಡುತ್ತಿದ್ದಾರೆ. ಆ ಮೂಲಕ ಹೊಸದಾಗಿ ಪರವಾನಗಿ ಪತ್ರವನ್ನು ಸಿದ್ಧಪಡಿಸಿ ವಿತರಿಸುತ್ತಿದ್ದಾರೆ. ಆಧಾರ್‌ ಸಂಖ್ಯೆ ಕಡ್ಡಾಯವಾಗಿರುವುದರಿಂದ ನಕಲಿ ಪರವಾನಗಿಗಳನ್ನು ಪತ್ತೆ ಹಚ್ಚುವುದು ಸುಲಭ ಎಂದು ಸಾರಿಗೆ ಅಧಿಕಾರಿಗಳು ಹೇಳುತ್ತಾರೆ.

ವ್ಯವಸ್ಥೆ ಜಾರಿಗೆ ಬಂದರೆ, ಆಟೊ ಚಾಲಕರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಸದ್ಯ ಶಾಂತಿನಗರದಲ್ಲಿ ನೋಂದಣಿ ಕೇಂದ್ರವಿದ್ದು, ಕೆಲವೇ ದಿನಗಳಲ್ಲಿ ನಗರದ ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್‌ಗಳು ಆರಂಭವಾಗಲಿವೆ. ನೋಂದಣಿ ಬಳಿಕ ಹೊಸದಾದ ಪರವಾನಗಿ ಪತ್ರಗಳು ಚಾಲಕರಿಗೆ ಸಿಗಲಿವೆ. ಅಂಥ ಪತ್ರ ಪಡೆಯದ ಆಟೊಗಳನ್ನು ಸಾರಿಗೆ ಹಾಗೂ ಪೊಲೀಸ್‌ ಸಿಬ್ಬಂದಿ ಜಪ್ತಿ ಮಾಡಲಿದ್ದಾರೆ.

‘ಇ– ಪರ್ಮಿಟ್‌ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಪ್ರಾಯೋಗಿಕ ಹಂತದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ, ಅವುಗಳನ್ನು ತಿದ್ದಿ ವಾರದೊಳಗೆ ಎಲ್ಲ ಕಡೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT