ಐಪಿಒ: ₹ 1,785 ಕೋಟಿ ಸಂಗ್ರಹ

7

ಐಪಿಒ: ₹ 1,785 ಕೋಟಿ ಸಂಗ್ರಹ

Published:
Updated:
ಐಪಿಒ: ₹ 1,785 ಕೋಟಿ ಸಂಗ್ರಹ

ನವದೆಹಲಿ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು (ಎಸ್‌ಎಂಇ) 2017ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 1,785 ಕೋಟಿ ಸಂಗ್ರಹಿಸಿವೆ. ಈ ಮೊತ್ತವು ಉದ್ಯಮಗಳು ಈ ಹಿಂದೆ ಸಂಗ್ರಹಿಸಿರುವ ಮೊತ್ತಕ್ಕಿಂತಲೂ ಮೂರು ಪಟ್ಟು ಹೆಚ್ಚಿಗೆ ಇದೆ. ಹಿಂದಿನ ಐದು ವರ್ಷಗಳಲ್ಲಿ ಉದ್ಯಮಗಳು ₹ 1,315 ಕೋಟಿ ಸಂಗ್ರಹಿಸಿದ್ದವು.

ವಹಿವಾಟು ವಿಸ್ತರಣೆ, ದುಡಿಯುವ ಬಂಡವಾಳ ಮತ್ತು ಇತರ ಕಾರ್ಪೊರೇಟ್‌ ಉದ್ದೇಶಗಳಿಗಾಗಿ ಬಂಡವಾಳ ಸಂಗ್ರಹಿಸಿವೆ. 2017ರಲ್ಲಿ ಎಸ್‌ಎಂಇ ಬಂಡವಾಳ ಮಾರುಕಟ್ಟೆಯ ಉತ್ತುಂಗದಲ್ಲಿತ್ತು. ಈ ವರ್ಷವೂ ಇದೇ ರೀತಿಯ ಚಟುವಟಿಕೆ ಮುಂದುವರಿಯು ನಿರೀಕ್ಷೆ ಮಾಡಲಾಗಿದೆ ಎಂದು ಪಂತೋಮಥ್ ಅಡ್ವೈಸರಿ ಸರ್ವೀಸಸ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾವೀರ್ ಲುನಾವತ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry