ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ದಾಖಲೆ ಬರೆದ ಷೇರುಪೇಟೆ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ:  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 2018ರ ಮೊದಲ ವಾರದಲ್ಲಿ ಇನ್ನೊಂದು ಹೊಸ ದಾಖಲೆ ಬರೆದಿದೆ.

ಶುಕ್ರವಾರದ ವಹಿವಾಟಿನಲ್ಲಿ 184 ಅಂಶಗಳ ಏರಿಕೆ ಕಂಡ ಸೂಚ್ಯಂಕವು 34,153 ಅಂಶಗಳಿಗೆ ಜಿಗಿತ ಕಂಡಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’  ಕೂಡ 54 ಅಂಶಗಳ ಹೆಚ್ಚಳ ದಾಖಲಿಸಿ 10,558 ಅಂಶಗಳಿಗೆ ಏರಿಕೆಯಾಗಿ ಇನ್ನೊಂದು ದಾಖಲೆಗೆ ಸಾಕ್ಷಿಯಾಯಿತು.

ಅಮೆರಿಕದ ಡೋವ್‌ ಜೋನ್ಸ್‌ ಕೈಗಾರಿಕಾ ಸರಾಸರಿಯು ಮೊದಲ ಬಾರಿಗೆ 25 ಸಾವಿರ ಅಂಶಗಳ ಗಡಿ ದಾಟಿರುವುದು ದೇಶಿ ಪೇಟೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ. ಮಾರುಕಟ್ಟೆಯು ಸತತ ಐದನೇ ವಾರವೂ ಏರಿಕೆ ದಾಖಲಿಸಿದಂತಾಗಿದೆ.  ವಿದೇಶಿ ಮತ್ತು ದೇಶಿ ಹೂಡಿಕೆದಾರರು ಗುರುವಾರದ ವಹಿವಾಟಿನಲ್ಲಿ ಕ್ರಮವಾಗಿ ₹ 212 ಕೋಟಿ ಮತ್ತು ₹ 325 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಯೆಸ್‌ ಬ್ಯಾಂಕ್‌ ಗರಿಷ್ಠ ಲಾಭ ಬಾಚಿಕೊಂಡಿದೆ. ಅತಿ ಹೆಚ್ಚು ಲಾಭ ಬಾಚಿಕೊಂಡ ಕಂಪನಿಗಳಲ್ಲಿ ಭಾರ್ತಿ ಏರ್‌ಟೆಲ್‌, ಇಂಡಸ್‌ಇಂಡ್  ಬ್ಯಾಂಕ್‌, ಏಷ್ಯನ್‌ ಪೇಂಟ್ಸ್‌, ಟಿಸಿಎಸ್‌, ಟಾಟಾ ಸ್ಟೀಲ್‌, ಐಟಿಸಿ, ಮಾರುತಿ ಸುಜುಕಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಸೇರಿವೆ.

‘ಅಮೆರಿಕದಲ್ಲಿನ ಉದ್ಯೋಗ ಅವಕಾಶಗಳ ಕುರಿತ ಸಕಾರಾತ್ಮಕ ವರದಿಗಳು ಜಾಗತಿಕ ಷೇರುಪೇಟೆಗಳಲ್ಲಿ ಆಶಾವಾದ ಹೆಚ್ಚಿಸಿವೆ. ದೇಶಿ ಮಾರುಕಟ್ಟೆ ಮೇಲೆಯೂ ಅದು ಪ್ರಭಾವ ಬೀರಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನರ್ಧನ ನೆರವಿನ ಕುರಿತ ಗೊಂದಲ ದೂರವಾಗಿರುವುದು  ಪೇಟೆಯಲ್ಲಿ ಉತ್ಸಾಹ ಮೂಡಿಸಿದೆ’ ಎಂದು ಮಾರುಕಟ್ಟೆ ತಜ್ಞರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT