ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರ ಉದ್ಯೋಗಕ್ಕೆ ಜಾಲತಾಣ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ನಾಗರಿಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ನೈಟಿಂಗೇಲ್ ಎಂಪವರ್‌ಮೆಂಟ್‌ ಫೌಂಡೇಷನ್‌, ‘ನೈಟಿಂಗೇಲ್ಸ್‌60ಪ್ಲಸ್‌’ ಹೆಸರಿನ ಜಾಲತಾಣ ಆರಂಭಿಸಿದೆ.

ಕೆ.ಆರ್.ಮಾರುಕಟ್ಟೆ ಬಳಿಯ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಹಿರಿಯ ನಾಗರಿಕರ ಉದ್ಯೋಗ ವಿನಿಮಯ ಕೇಂದ್ರವನ್ನು ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಶುಕ್ರವಾರ ಉದ್ಘಾಟಿಸಿದರು. ಇದೇ ವೇಳೆ ‘www.nightingalesjobs60plus.com‘ ಜಾಲತಾಣವನ್ನೂ ಅನಾವರಣಗೊಳಿಸಿದರು.

ಫೌಂಡೇಶನ್‌ ಟ್ರಸ್ಟಿ ರಾಧಾ ಮೂರ್ತಿ, ‘2017ರಲ್ಲಿ ಐದು ಉದ್ಯೋಗ ಮೇಳ ನಡೆಸಿ 2,423 ಹಿರಿಯ ನಾಗರಿಕರಿಗೆ ಉದ್ಯೋಗ ಕೊಡಿಸಿದ್ದೇವೆ. ಅವರಲ್ಲಿ ಹಲವರು ಲೆಕ್ಕಿಗರು, ಕಚೇರಿ ಮೇಲ್ವಿಚಾರಕರು ಹಾಗೂ ಗ್ರಂಥಪಾಲಕರಾಗಿದ್ದಾರೆ’ ಎಂದರು.

‘ಹಿರಿಯ ನಾಗರಿಕರಲ್ಲಿ ಸದ್ಯಶೇ 10ರಷ್ಟು ಮಂದಿ ಮಾತ್ರ ಉತ್ತಮ ನಿವೃತ್ತಿ ವೇತನ ಪಡೆಯುತ್ತಿದ್ದಾರೆ. ಉಳಿದವರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಅಂಥ ಹಿರಿಯ ನಾಗರಿಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಕೇಂದ್ರ ಹಾಗೂ ಜಾಲತಾಣ ಅರಂಭಿಸಿದ್ದೇವೆ’ ಎಂದರು.

‘‌ಅಸೆಟ್‌ ಕೇರ್‌ ಆ್ಯಂಡ್‌ ರಿಕನ್‌ಸ್ಟ್ರಕ್ಷನ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಸಹಯೋಗದಲ್ಲಿ ಈ ಜಾಲತಾಣ ಕಾರ್ಯಾರಂಭಗೊಂಡಿದೆ. ರಾಜ್ಯದ ಸರ್ಕಾರಿ, ಸರ್ಕಾರೇತರ ಹಾಗೂ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಇದರಲ್ಲಿ ಸಿಗಲಿದೆ. ಹಿರಿಯ ನಾಗರಿಕರು ಸ್ವ– ವಿವರವನ್ನು ಇಲ್ಲಿ ಅಪ್‌ಲೋಡ್‌ ಮಾಡಬಹುದು.’

‘ಅಮೃತ್‌ ಎಂಜಿನಿಯರ್ಸ್‌, ಸಿಎಂಆರ್‌ ಯೂನಿವರ್ಸಿಟಿ, ಜಸ್ಟ್‌ ಬುಕ್ಸ್‌, ವಿಟಿಯು ಸೇರಿದಂತೆ ಹಲವು ಸಂಸ್ಥೆಗಳು ಹಿರಿಯ ನಾಗರಿಕರಿಗೆ ಉದ್ಯೋಗ ನೀಡುವ ಭರವಸೆ ನೀಡಿವೆ’ ಎಂದು ರಾಧಾ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT