ವಿಜಯಪುರ: ‘ನಗರದ ದಲಿತ ವಿದ್ಯಾರ್ಥಿನಿ ಮೇಲೆ ಈಚೆಗೆ ಅತ್ಯಾಚಾರ ಎಸಗಿ, ಕೊಲೆಗೈದ ಘಟನೆ ಖಂಡನಾರ್ಹ. ಪರಿಹಾರ, ನೌಕರಿಗಿಂತ ನ್ಯಾಯ ಬೇಕಿದೆ. ನಿಮ್ಮೊಂದಿಗೆ ನಾವೂ ಇರುತ್ತೇವೆ’ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಎಡೆಯೂರು ಶಾಖೆಯ ಷಡಕ್ಷರಿಮುನಿ ಸ್ವಾಮೀಜಿ ಸಂತ್ರಸ್ತೆಯ ಕುಟುಂಬಕ್ಕೆ ಧೈರ್ಯ ತುಂಬಿದರು.

ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಸರ್ಕಾರದ ತಾತ್ಕಾಲಿಕ ನೌಕರಿ ಒಪ್ಪಿಕೊಳ್ಳಬೇಡಿ. ಕಾಯಂ ನೌಕರಿ ಕೊಡುವಂತೆ ನಾವೂ ಆಗ್ರಹಿಸುತ್ತೇವೆ’ ಎಂದು ಹೇಳಿದರು.

‘ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ಈ ತರಹದ ಘಟನೆಗಳು ಮುಂದೆ ಎಲ್ಲಿಯೂ ಮರುಕಳಿಸಬಾರದು. ಈ ನಿಟ್ಟಿನಲ್ಲಿ ದೇಶದಲ್ಲೇ ಕಠಿಣ ಕಾನೂನು ರೂಪಿಸಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.