ಕವಿ ಮರಣಾನಂತರ

7

ಕವಿ ಮರಣಾನಂತರ

Published:
Updated:
ಕವಿ ಮರಣಾನಂತರ

ತೆಲುಗಿನಲ್ಲಿ: ಮೆರ್ಸಿ ಮಾರ್ಗರೆಟ್ (2017 ಸಾಲಿನ ಕೇಂದ್ರಸಾಹಿತ್ಯ ಯುವ ಪುರಸ್ಕಾರ ಪಡೆದ ಕವಿ) ಕನ್ನಡಕ್ಕೆ: ಸೃಜನ್

ಅನ್ಯಗ್ರಹವಾಸಿಯಂತಿದ್ದ ಇವನ

ದೇಹಕ್ಕೆ ಈ ಭೂಮಿಯಲ್ಲಿ

ಅಂತ್ಯಕ್ರಿಯೆಗಳು ಜರುಗಿದವು

ಪಂಜರದಲ್ಲಿ ಬಂಧಿಸಿಟ್ಟಿದ್ದ ಪಾರಿವಾಳಗಳನ್ನು

ಅವನ ಸಂಸ್ಮರಣಾರ್ಥ ಹಾರಿಬಿಟ್ಟರು

ಕವಿತೆಗಳನ್ನು ಅವನ ಶವಯಾತ್ರೆಯಲ್ಲಿ ಚೆಲ್ಲುತ್ತಾ ಮೆರವಣಿಗೆ ಮಾಡಿದರು

ಒಬ್ಬೊಬ್ಬರೇ ಹಿಡಿ ಮಣ್ಣಿನಿಂದ ಅವನನ್ನು ಮುಚ್ಚಿ

ಅವನ ಕಥಾವಸ್ತುಗಳನ್ನು ಅದರಲ್ಲಿ ಹೂಳಿದರು

ಅವನು ಪೂರ್ತಿಯಾಗಿ ಕಣ್ಮರೆಯಾಗುವ ಕ್ರಮದಲ್ಲಿ

ಮೇಜಿನ ಮೇಲೆ ಅವನ ಚಾಳೀಸು ಕಾಲು ಚಾಚಿಕೊಂಡು

ಎದುರು ನೋಡುತ್ತಿತ್ತು.

ಪುಸ್ತಕ ತೆರೆದಿತ್ತು

ಚಾಳೀಸು ಬಾಗಿಲಕಡೆ ನೋಡುತ್ತಲೇಇತ್ತು

ಅವನ ಪಾದರಕ್ಷೆಗಳಿಗೆ ಸತ್ಯ ಗೊತ್ತಿದ್ದರೂ ಒಳಗೆ ಹೋಗುವುದಿಲ್ಲ

ದೂರದ ಕಿಟಕಿಗೆ ಕವಿತೆಯೊಂದು ಜೋತುಬಿದ್ದಿತ್ತು

ಮನೆಯೊಳಕ್ಕೆ ಇನ್ನು ಯಾವ ಬೆಳಕೂ ಇಣುಕುವುದಿಲ್ಲ

ಮಳೆಗೆ ಆ ಬೀದಿಯಲ್ಲಿ ಕೆಲಸವಿರುವುದಿಲ್ಲ

ಅವನು ಕಣ್ಮರೆಯಾಗಿದ್ದಾನೆಂಬ ಸುದ್ದಿ

ಪತ್ರಿಕೆಯಲ್ಲಿ ಮುಖ್ಯ ಶೀರ್ಷಿಕೆಯಾಗುತ್ತಿತ್ತು.ತೆಲುಗಿನಲ್ಲಿ: ಮೆರ್ಸಿ ಮಾರ್ಗರೆಟ್ (2017 ಸಾಲಿನ ಕೇಂದ್ರಸಾಹಿತ್ಯ ಯುವ ಪುರಸ್ಕಾರ ಪಡೆದ ಕವಿ) ಕನ್ನಡಕ್ಕೆ: ಸೃಜನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry