ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮ ರತ್ನಕಟ್ಟಿ ನಿಧನ

7

ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮ ರತ್ನಕಟ್ಟಿ ನಿಧನ

Published:
Updated:
ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮ ರತ್ನಕಟ್ಟಿ ನಿಧನ

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ್ತಿ, ಇಲ್ಲಿನ ನವ ಅಯೋಧ್ಯಾನಗರ ನಿವಾಸಿ ಚನ್ನಬಸಮ್ಮ ಚನ್ನಪ್ಪ ರತ್ನಕಟ್ಟಿ (107) ಶನಿವಾರ ಸಂಜೆ ನಿಧ

ನರಾದರು. ಅವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಚನ್ನಬಸಮ್ಮ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಅರೆಮಲ್ಲಾಪುರದವರು. ತಹಶೀಲ್ದಾರ್‌ ಹುದ್ದೆ ಅರಸಿ ಬಂದರೂ ಅದನ್ನು ನಿರಾಕರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. 14ನೇ ವಯಸ್ಸಿನಲ್ಲಿ ಚನ್ನಪ್ಪ ರತ್ನಕಟ್ಟಿ ಅವರನ್ನು ಮದುವೆಯಾಗಿ ಪತಿಯಿಂದ ಚಳವಳಿಯ ಸ್ಫೂರ್ತಿ ಪಡೆದರು. 19ನೇ ವಯಸ್ಸಿನಲ್ಲಿ, 3 ತಿಂಗಳ ಮಗುವಿನೊಂದಿಗೆ ಮೂರು ವರ್ಷ ಜೈಲು ವಾಸ ಅನುಭವಿಸಿದರು.

ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ ಗುಡಿಹಾಳ ರಸ್ತೆ ಬಳಿಯ ಅವರ ಜಮೀನಿನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry